ಲಕ್ನೋ: ನಾನು ಸಚಿವನಾಗಿರುವುದು ಅನಿರೀಕ್ಷಿವಲ್ಲ, ನಿಷ್ಟಾವಂತ ಕಾರ್ಯಕರ್ತರಿಗೆ ಬಿಜೆಪಿಯ ಕೊಡುಗೆಯಾಗಿದೆ ಮತ್ತು ಸಚಿವ ಸ್ಥಾನಕ್ಕೆ ನನ್ನ ನೇಮಕಾತಿಯು ಪ್ರತಿಪಕ್ಷಗಳಾದ ಸಮಾಜವಾದಿ, ಕಾಂಗ್ರೆಸ್ ಪಕ್ಷದ ಮುಖಕ್ಕೆ ನೀಡಿದ ಕಪಾಲಮೋಕ್ಷ ಎಂದು ಅದಿತ್ಯನಾಥ್ ಸರ್ಕಾರ ಏಕೈಕ ಮುಸ್ಲಿಮ್ ಸಚಿವ ಡ್ಯಾನಿಶ್ ಆಝಾದ್ ಅನ್ಸಾರಿ ತಿಳಿಸಿದ್ದಾರೆ.
ಈ ಹಿಂದೆ ಉತ್ತರ ಪ್ರದೇಶದ ಶಾಸಕಾಂಗದ ಎರಡೂ ಸದನದಲ್ಲಿ ಸದಸ್ಯರಲ್ಲದ ಅನ್ಸಾರಿ ಅವರು ಬಲ್ಲಿಯಾ ಕ್ಷೇತ್ರದ ಜಯಗಳಿಸಿದ್ದು, ಸದ್ಯ ಆದಿತ್ಯನಾಥ್ ಸರ್ಕಾರದ 52 ಸಚಿವರೊಂದಿಗೆ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನನಗೆ ಸಚಿವನಾಗಿ ಅವಕಾಶ ಸಿಕ್ಕಿರುವುದಕ್ಕೆ ತುಂಬಾ ಸಂತೋಷವಾಗಿದ್ದು, ನನ್ನಂತಹ ಸಾಮಾನ್ಯ ಕಾರ್ಯಕರ್ತನಿಗೆ ಇಂತಹ ದೊಡ್ದ ಅವಕಾಶ ನೀಡಿರುವುದಕ್ಕೆ ನಾನು ಪಕ್ಷಕ್ಕೆ ಧನ್ಯವಾದ ಸಲ್ಲಿಸುತ್ತೇನೆ. ನನ್ನ ಸಚಿವ ಸ್ಥಾನವು ಸಮಾಜವಾದಿ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಬಿಜೆಪಿ ನೀಡಿದ ಕಪಾಳಮೋಕ್ಷವಾಗಿದೆ. ಆದಿತ್ಯನಾಥ್ ಸರ್ಕಾರದ ಪ್ರತಿ ಯೋಜನೆಯ ಲಾಭವನ್ನು ಮುಸ್ಲಿಮರು ಪಡೆದಿದ್ದಾರೆ. ನಾನು ಮುಸ್ಲಿಮರನ್ನು ಒಗ್ಗೂಡಿಸಲು ಶ್ರಮಿಸುತ್ತೇನೆ ಎಂದು ತಿಳಿಸಿದ್ದಾರೆ.
ಪ್ರಸಕ್ತ ಬಿಜೆಪಿಯ ಬಗ್ಗೆ ಮುಸ್ಲಿಮರಿಗೆ ನಂಬಿಕೆ ಹೆಚ್ಚಾಗಿದೆ ಎಂದು ತಿಳಿಸಿದ್ದಾರೆ.
32 ವರ್ಷದ ಅನ್ಸಾರಿ ಅವರು 2010 ರಲ್ಲಿ ಲಕ್ನೋ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿ ದೆಸೆಯಲ್ಲಿದ್ದಾಗ ಎಬಿವಿಪಿ ಗೆ ಸೇರ್ಪಡೆಗೊಂಡಿದ್ದರು. 2018 ರ ಯೋಗಿ ಸರ್ಕಾರದಲ್ಲಿ ಉರ್ದು ಭಾಷಾ ಸಮಿತಿಗೆ ನಾಮನಿರ್ದೇಶನಗೊಂಡಿದ್ದರು ಮತ್ತು ರಾಜ್ಯ ಸಚಿವ ಸ್ಥಾನಮಾನವನ್ನು ಪಡೆದಿದ್ದರು.
ಈ ಮಧ್ಯೆ ಅಸೆಂಬ್ಲಿಮ್ ಚುನಾವಣೆಗೂ ಮೊದಲು ಅನ್ಸಾರಿ ಅವರನ್ನು ಬಿಜೆಪಿ ಅಲ್ಪಸಂಖ್ಯಾತ ವಿಭಾಗದ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಗೊಳಿಸಲಾಗಿತ್ತು.