Home ಟಾಪ್ ಸುದ್ದಿಗಳು ಏಕದಿನ ವಿಶ್ವಕಪ್; ತೆರಿಗೆ ವಿನಾಯಿತಿ ಸಿಗದಿದ್ದಲ್ಲಿ ಬಿಸಿಸಿಐಗೆ ಬೃಹತ್ ಮೊತ್ತದ ನಷ್ಟ…!

ಏಕದಿನ ವಿಶ್ವಕಪ್; ತೆರಿಗೆ ವಿನಾಯಿತಿ ಸಿಗದಿದ್ದಲ್ಲಿ ಬಿಸಿಸಿಐಗೆ ಬೃಹತ್ ಮೊತ್ತದ ನಷ್ಟ…!

ಹೊಸದಿಲ್ಲಿ: ಭಾರತದಲ್ಲಿ ಮುಂದಿನ ವರ್ಷದ ಅಕ್ಟೋಬರ್–ನವೆಂಬರ್ ತಿಂಗಳಲ್ಲಿ 50 ಓವರ್‌ಗಳ ಏಕದಿನ ಕ್ರಿಕೆಟ್ ವಿಶ್ವಕಪ್ ಪಂದ್ಯಾವಳಿ ನಡೆಯಲಿದ್ದು, ಐಸಿಸಿಯ ಪ್ರಸಾರ ಆದಾಯದ ಮೇಲೆ ಕೇಂದ್ರ ಸರ್ಕಾರ ಶೇಕಡಾ 21.84 ಹೆಚ್ಚುವರಿ ತೆರಿಗೆ ಶುಲ್ಕವನ್ನು ವಿಧಿಸುವ ನಿರ್ಧಾರವನ್ನು ಬದಲಾಯಿಸದಿದ್ದಲ್ಲಿ, ಬಿಸಿಸಿಐ ಸುಮಾರು ₹ 955 ಕೋಟಿ (116 ಮಿಲಿಯನ್ ಡಾಲರ್) ಕಳೆದುಕೊಳ್ಳಬಹುದು ಎಂದು ಬಿಸಿಸಿಐ ಯ ವರದಿ ತಿಳಿಸಿದೆ.


‘ಭಾರತದಲ್ಲಿ 2023ರ ಅಕ್ಟೋಬರ್ ಮತ್ತು ನವೆಂಬರ್ ತಿಂಗಳಲ್ಲಿ ಐಸಿಸಿಯ ಪ್ರಮುಖ ಪಂದ್ಯಾವಳಿಗಳಲ್ಲೊಂದಾದ ಏಕದಿನ ಕ್ರಿಕೆಟ್ ವಿಶ್ವಕಪ್ ಆಯೋಜಿಸಲಾಗಿದೆ. ಐಸಿಸಿ ಪಂದ್ಯಾವಳಿಗೆ ತೆರಿಗೆ ವಿನಾಯಿತಿ ಪಡೆಯುವ ಬಾಧ್ಯತೆ ಬಿಸಿಸಿಐ ಮೇಲಿದೆ’ಎಂದು ಅಕ್ಟೋಬರ್ 18ರಂದು ಮುಂಬೈನಲ್ಲಿ ನಡೆಯಲಿರುವ ವಾರ್ಷಿಕ ಸಾಮಾನ್ಯ ಸಭೆ ಹಿನ್ನೆಲೆಯಲ್ಲಿ ರಾಜ್ಯ ಘಟಕಗಳಿಗೆ ಕಳುಹಿಸಿರುವ ವರದಿಯಲ್ಲಿ ಈ ಬಗ್ಗೆ ಉಲ್ಲೇಖಿಸಲಾಗಿದೆ.
‘ಭಾರತದ ತೆರಿಗೆ ಅಧಿಕಾರಿಗಳಿಂದ 2023ರ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯ ಪ್ರಸಾರ ಆದಾಯದ ಮೇಲೆ ಶೇಕಡ 20 ತೆರಿಗೆ(ಹೆಚ್ಚುವರಿ ಶುಲ್ಕ ಹೊರತುಪಡಿಸಿ) ಕುರಿತಾದ ಆದೇಶ ಐಸಿಸಿಗೆ ತಲುಪಿದೆ.


ಇದರಿಂದಾಗಿ ಐಸಿಸಿಯಿಂದ ಬಿಸಿಸಿಐಗೆ ಬರಲಿರುವ ಆದಾಯದಲ್ಲಿ ಕಡಿತವಾಗಲಿದೆ ಎಂದು ರಾಜ್ಯ ಘಟಕಗಳ ಜೊತೆ ಬಿಸಿಸಿಐ ಹಂಚಿಕೊಂಡಿರುವ ದಾಖಲೆಯಲ್ಲಿ ತಿಳಿಸಲಾಗಿದೆ.


ಐಸಿಸಿ ನಿಯಮಾವಳಿಗಳ ಪ್ರಕಾರ, ವಿಶ್ವಕಪ್ ಆತಿಥ್ಯ ವಹಿಸುವ ದೇಶವು ಅಲ್ಲಿನ ಸರ್ಕಾರದಿಂದ ತೆರಿಗೆ ವಿನಾಯಿತಿ ಪಡೆಯಬೇಕು. ಆದರೆ, ಭಾರತದ ತೆರಿಗೆ ನಿಯಮಗಳಲ್ಲಿ ಅಂತಹ ವಿನಾಯಿತಿಗಳಿಗೆ ಅವಕಾಶ ಇಲ್ಲದಿರುವುದರಿಂದ 2016ರ ಟಿ–20ವಿಶ್ವಕಪ್ ಆಯೋಜನೆ ಸಂದರ್ಭ ಬಿಸಿಸಿಐ ₹193(23.5 ಮಿಲಿಯನ್) ಕೋಟಿ ಕಳೆದುಕೊಂಡಿದೆ. ಈ ಸಂಬಂಧ ಬಿಸಿಸಿಐ ಈಗಲೂ ಐಸಿಸಿ ಟ್ರಿಬ್ಯೂನಲ್‌ನಲ್ಲಿ ಹೋರಾಡುತ್ತಿದೆ.

Join Whatsapp
Exit mobile version