Home ಟಾಪ್ ಸುದ್ದಿಗಳು ಕುಟುಂಬ ಪ್ರತಿನಿಧಿಸುತ್ತಾ ಬಂದಿರುವ ಗಾಂದರ್‌ಬಲ್ ಕ್ಷೇತ್ರದಿಂದ ಒಮರ್‌ ಅಬ್ದುಲ್ಲಾ ಸ್ಪರ್ಧೆ

ಕುಟುಂಬ ಪ್ರತಿನಿಧಿಸುತ್ತಾ ಬಂದಿರುವ ಗಾಂದರ್‌ಬಲ್ ಕ್ಷೇತ್ರದಿಂದ ಒಮರ್‌ ಅಬ್ದುಲ್ಲಾ ಸ್ಪರ್ಧೆ

ಶ್ರೀನಗರ: ತಮ್ಮ ಕುಟುಂಬದವರು ಹಿಂದಿನಿಂದಲೂ ಪ್ರತಿನಿಧಿಸುತ್ತಾ ಬಂದಿರುವ ಗಾಂದರ್‌ಬಲ್ ಕ್ಷೇತ್ರದಿಂದಲೇ ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಒಮರ್‌ ಅವರು ಸ್ಪರ್ಧಿಸಲಿದ್ದಾರೆ ಎಂದು ನ್ಯಾಷನಲ್‌ ಕಾನ್ಫರೆನ್ಸ್‌ ಪಕ್ಷ ಭಾನುವಾರ ಘೋಷಿಸಿದೆ.

ಅಜ್ಜ ಶೇಖ್‌ ಮುಹಮ್ಮದ್‌ ಅಬ್ದುಲ್ಲಾ, ತಂದೆ ಫಾರೂಕ್‌ ಅಬ್ದುಲ್ಲಾ ಪ್ರತಿನಿಧಿಸುತ್ತಾ ಬಂದಿರುವ ಕ್ಷೇತ್ರ ಇದಾಗಿದೆ. ನ್ಯಾಷನಲ್‌ ಕಾನ್ಫರೆನ್ಸ್‌ನ ಉಪಾಧ್ಯಕ್ಷರಾಗಿರುವ ಒಮರ್‌ ಅಬ್ದುಲ್ಲಾ ಕೂಡ ಇದೇ ಕ್ಷೇತ್ರದಿಂದ ಹಲವು ಬಾರಿ ಸ್ಪರ್ಧಿಸಿದ್ದರು.ಮ
.
ಈ ಕ್ಷೇತ್ರದಿಂದ ಒಮ್ಮೆ ಶಾಸಕರಾಗಿಯೂ ಅವರು ಆಯ್ಕೆ ಆಗಿದ್ದರು. 2008ರ ನಂತರ ಅವರು ಈ ಕ್ಷೇತ್ರದಿಂದ ಸ್ಪರ್ಧಿಸಿರಲಿಲ್ಲ.

ಸುಮಾರು 16 ವರ್ಷಗಳ ಬಳಿಕ ಈ ಮತ್ತೊಮ್ಮೆ ತಮ್ಮ ಕುಟುಂಬದ ಬಿಗಿ ಹಿಡಿತವಿರುವ ಗಾಂದರ್‌ಬಲ್‌ನಿಂದ ಅವರು ಸ್ಪರ್ಧಿಸುತ್ತಿದ್ದಾರೆ.

ಒಮರ್‌ ಅವರು ಈ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವುದು ಜಮ್ಮು ಮತ್ತು ಕಾಶ್ಮೀರದಲ್ಲಿ ಅಬ್ದುಲ್ಲಾ ಅವರ ಕುಟುಂಬವು ಮತ್ತೊಮ್ಮೆ ಮುನ್ನಲೆಗೆ ಬರುತ್ತಿರುವುದರ ಸಂಕೇತ ಎಂದೇ ರಾಜಕೀಯ ವಿಶ್ಲೇಷಕರು ಚರ್ಚಿಸುತ್ತಿದ್ದಾರೆ.

2002ರಲ್ಲಿ ಮೊದಲ ಬಾರಿಗೆ ಒಮರ್‌ ಅವರು ಇಲ್ಲಿಂದ ಸ್ಪರ್ಧಿಸಿದ್ದರು. ಆಗ ಅವರು ಪಿಡಿಪಿ ಪಕ್ಷದ ಖಾಜಿ ಮುಹಮ್ಮದ್‌ ಅಫ್ಝಲ್ ಅವರ ಎದುರು ಸೋತಿದ್ದರು. ನಂತರ 2008ರಲ್ಲಿ ಮತ್ತೊಮ್ಮೆ ಇದೇ ಕ್ಷೇತ್ರದಿಂದ ಸ್ಪರ್ಧಿಸಿ ಅಫ್ಝಲ್ ಅವರ ವಿರುದ್ಧ ಗೆಲುವು ಸಾಧಿಸಿದ್ದರು. 2014ರ ಚುನಾವಣೆಯಲ್ಲಿ ಒಮರ್‌ ಅವರು ಗಾಂದರ್‌ಬಲ್ ಬದಲು ಬೇರೆ ಕ್ಷೇತ್ರವನ್ನು ಆರಿಸಿಕೊಂಡಿದ್ದರು.

Join Whatsapp
Exit mobile version