Home ಟಾಪ್ ಸುದ್ದಿಗಳು ಕಾಂಗ್ರೆಸ್ ಸಂಸದ ವಸಂತ ಚವಾಣ್ ನಿಧನ

ಕಾಂಗ್ರೆಸ್ ಸಂಸದ ವಸಂತ ಚವಾಣ್ ನಿಧನ

ಮುಂಬೈ: ಅನಾರೋಗ್ಯದಿಂದ ಬಳಲುತ್ತಿದ್ದ ನಾಂದೇಡ್ ನ ಕಾಂಗ್ರೆಸ್ ಸಂಸದ ವಸಂತ ಚವಾಣ್ ಅವರು ಇಂದು (ಸೋಮವಾರ) ಹೈದರಾಬಾದ್ ನಲ್ಲಿ ನಿಧನರಾಗಿದ್ದಾರೆ.


ವಸಂತ ಚವಾಣ್ ಅವರಿಗೆ 70 ವರ್ಷ ವಯಸ್ಸಾಗಿತ್ತು. ನಾಂದೇಡ್ನಲ್ಲಿ ಚವಾಣ್ ಅಂತ್ಯಕ್ರಿಯೆ ನಡೆಯಲಿದೆ ಎಂದು ಮಹಾರಾಷ್ಟ್ರ ಪ್ರದೇಶ ಕಾಂಗ್ರೆಸ್ ಸಮಿತಿ (ಎಂಪಿಸಿಸಿ) ತಿಳಿಸಿದೆ.


ವಸಂತ್ ಚವಾಣ್ ಅವರು ಪ್ರಾಮಾಣಿಕ ಮತ್ತು ನಿಷ್ಠಾವಂತ ಕಾಂಗ್ರೆಸ್ ನಾಯಕ ಎಂದು ಹೆಸರಾಗಿದ್ದರು. ಇತ್ತೀಚೆಗಷ್ಟೇ ನಡೆದ ಲೋಕಸಭೆ ಚುನಾವಣೆಯಲ್ಲಿ ನಾಂದೇಡ್ ಕ್ಷೇತ್ರದಿಂದ ಭರ್ಜರಿ ಗೆಲುವು ಸಾಧಿಸಿದ್ದರು. ಮಹಾವಿಕಾಸ್ ಅಘಾಡಿಯ ಎಲ್ಲಾ ಮೂರು ಪಕ್ಷದ ನಾಯಕರು ಅಂದು ಚವಾಣ್ ಪರ ಒಮ್ಮತದಿಂದ ಪ್ರಚಾರ ಮಾಡಿದ್ದರು.

Join Whatsapp
Exit mobile version