Home ಟಾಪ್ ಸುದ್ದಿಗಳು ಡಿಸಿಗೆ ದೂರು ಕೊಟ್ಟು ಅನ್ನಭಾಗ್ಯದ ಹಣ ಪಡೆದ ವೃದ್ಧೆ

ಡಿಸಿಗೆ ದೂರು ಕೊಟ್ಟು ಅನ್ನಭಾಗ್ಯದ ಹಣ ಪಡೆದ ವೃದ್ಧೆ

ಚಾಮರಾಜನಗರ: ವೃದ್ಧಾಪ್ಯ ವೇತನ ಹಾಗೂ ಅನ್ನಭಾಗ್ಯದ ಹಣ ಕೈ ಸೇರದ್ದಕ್ಕೆ ನೊಂದ ವೃದ್ಧೆಯೊಬ್ಬರು ಡಿಸಿಗೆ ದೂರು ಕೊಟ್ಟು ತನ್ನ ಹಣವನ್ನು ಪಡೆದ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿ ಗ್ರಾಮದಲ್ಲಿ ನಡೆದಿದೆ.


ಚಾಮರಾಜನಗರ ತಾಲೂಕಿನ ಕಿಲಗೆರೆ ಗ್ರಾಮದ ಚೆನ್ನಬಸಮ್ಮ ಚಾಮರಾಜನಗರ ಡಿಸಿ ಶಿಲ್ಪಾನಾಗ್ ಅವರಿಗೆ ಕಳೆದ 21 ರಂದು ದೂರು ಕೊಟ್ಟಿದ್ದರು. ತೆರಕಣಾಂಬಿ ಗ್ರಾಹಕ ಸೇವಾಕೇಂದ್ರದಲ್ಲಿ ತನಗರಿವಿಲ್ಲದೇ ವೃದ್ಧಾಪ್ಯ ವೇತನ 1200₹, ಹಾಗೂ ಅನ್ನಭಾಗ್ಯದ ನಗದು 340₹ ಡ್ರಾ ಆಗಿದೆ ಆದರೆ ಅದನ್ನು ತಾನು ಪಡೆದಿಲ್ಲ, ತನಗೆ ನ್ಯಾಯ ದೊರಕಿಸಿಕೊಡಿ ಎಂದು ಹೇಳಿದ್ದರು. ಡಿಸಿ ಚಾಮರಾಜನಗರ ತಹಶಿಲ್ದಾರ್ ಬಸವರಾಜು ಅವರಿಗೆ ವಿಚಾರಣೆ ನಡೆಸುವಂತೆ ಸೂಚಿಸಿದ್ದರು.


ತಹಶಿಲ್ದಾರ್ ಬಸವರಾಜು ಅವರು ಗ್ರಾಹಕ ಸೇವಾ ಕೇಂದ್ರದ ಪ್ರತಿನಿಧಿ, ಫಲಾನುಭವಿ ಚೆನ್ನಬಸಮ್ಮ ಇಬ್ಬರನ್ನೂ ವಿಚಾರಣೆ ನಡೆಸಿ ಡ್ರಾ ಆದ ಹಣ ವೃದ್ಧೆ ಕೈ ಸೇರಿದಿರುವುದು ಮೇಲ್ನೋಟಕ್ಕೆ ಕಂಡುಬಂದಿದ್ದರಿಂದ ಗ್ರಾಹಕ ಸೇವಾ ಕೇಂದ್ರದ ಪ್ರತಿನಿಧಿಯಿಂದ 1540₹ ನ್ನು ವೃದ್ಧೆಗೆ ಕೊಡಿಸಿದ್ದಾರೆ.

Join Whatsapp
Exit mobile version