Home ಟಾಪ್ ಸುದ್ದಿಗಳು ರೈಲನ್ನು ಗಮನಿಸದೇ ಪ್ಲಾಟ್‍ಫಾರ್ಮ್‌ನಿಂದ ಹಳಿಗೆ ಇಳಿದ ವೃದ್ಧ – ಆರ್‌ಪಿಎಫ್ ಸಿಬ್ಬಂದಿಯಿಂದ ರಕ್ಷಣೆ

ರೈಲನ್ನು ಗಮನಿಸದೇ ಪ್ಲಾಟ್‍ಫಾರ್ಮ್‌ನಿಂದ ಹಳಿಗೆ ಇಳಿದ ವೃದ್ಧ – ಆರ್‌ಪಿಎಫ್ ಸಿಬ್ಬಂದಿಯಿಂದ ರಕ್ಷಣೆ

ದಾವಣಗೆರೆ: ರೈಲು ಬರುವುದನ್ನು ಗಮನಿಸದೇ ಹಳಿ ದಾಟಲು ಹೋದ ವೃದ್ಧನನ್ನು ಆರ್‌ಪಿಎಫ್ ಸಿಬ್ಬಂದಿ ರಕ್ಷಿಸಿದ ಘಟನೆ ದಾವಣಗೆರೆಯಲ್ಲಿ ನಡೆದಿದೆ.

ರೈಲ್ವೇ ಪ್ಲಾಟ್‍ಫಾರ್ಮ್‍ನಿಂದ ವೃದ್ಧರೊಬ್ಬರು ಕೆಳಗಿಳಿದಿದ್ದಾರೆ. ಈ ವೇಳೆ ರೈಲು ಸಮೀಪಕ್ಕೆ ಬಂದಿದೆ. ಕೂಡಲೇ ಆರ್‌ಪಿಎಫ್ ಸಿಬ್ಬಂದಿ ಅವರನ್ನು ಪಕ್ಕಕ್ಕೆ ಎಳೆದುಕೊಂಡಿದ್ದಾರೆ. ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ರಂಗಪ್ಪ ಎಂಬ ವೃದ್ಧ ಹಳಿ ದಾಟುವ ವೇಳೆ ಅದೇ ಮಾರ್ಗದಲ್ಲಿ ರೈಲು ಬಂದಿದೆ. ಈ ವೇಳೆ ಕಾರ್ಯನಿರ್ವಹಿಸುತ್ತಿದ್ದ ಆರ್‌ಪಿಎಫ್ ಕಾನ್ಸ್‌ಟೇಬಲ್ ಶಿವಾನಂದ ವೃದ್ಧನನ್ನು ಕಾಪಾಡಿದ್ದಾರೆ. ಕೊಚವಲ್ಲಿ – ಹುಬ್ಬಳ್ಳಿ ಎಕ್ಸ್‌ಪ್ರೆಸ್ ಟ್ರೈನ್ ಇದಾಗಿದ್ದು, ಕೊಚವಲ್ಲಿಯಿಂದ ಹುಬ್ಬಳ್ಳಿಗೆ ತೆರಳುವ ಮಾರ್ಗ ಮಧ್ಯೆ ದಾವಣಗೆರೆ ರೈಲು ನಿಲ್ದಾಣಕ್ಕೆ ಆಗಮಿಸುವ ವೇಳೆ ಈ ಘಟನೆ ನಡೆದಿದೆ.

ಕಾನ್ಸ್‌ಟೇಬಲ್ ಶಿವಾನಂದ ಅವರ ಸಮಯಪ್ರಜ್ಞೆಗೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Join Whatsapp
Exit mobile version