ಹೊಸದಿಲ್ಲಿ: ತೈಲ ಬೆಲೆಯಲ್ಲಿ ಪುನಃ ಏರಿಕೆಯಾಗಿದ್ದು,ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಮಂಗಳವಾರ ಮತ್ತೆ 80 ಪೈಸೆಯಷ್ಟು ಹೆಚ್ಚಿಸಿವೆ. ಕಳೆದ 15 ದಿನಗಳಲ್ಲಿ 13ನೇ ಬಾರಿ ಏರಿಕೆಯಾಗಿದ್ದು, ಒಟ್ಟು 9.2 ರೂಪಾಯಿ ಹೆಚ್ಚಿದಂತಾಗಿದೆ.
ಚಿಲ್ಲರೆ ಇಂಧನ ಮಾರಾಟ ಸಂಸ್ಥೆಗಳ ಅಧಿಸೂಚನೆಯ ಪ್ರಕಾರ ದೆಹಲಿಯಲ್ಲಿ ಪೆಟ್ರೋಲ್ ಬೆಲೆ 104.61 ರೂ. ಮತ್ತು ಡಿಸೆಲ್ ಬೆಲೆ 95.87 ರೂ. ಆಗಿದೆ. ಮಂಗಳೂರಿನಲ್ಲಿ ಪೆಟ್ರೋಲ್ ದರ108.6 ರೂ ಹಾಗೂ ಡೀಸೆಲ್ ದರ 91.27 ರೂ ಆಗಿದೆ.
ತೈಲ ಬೆಲೆಯು ದಿನೇದಿನೇ ವೃದ್ಧಿಸುತ್ತಲೇ ಇದ್ದು,ವಾಹನ ಚಾಲಕರ ದೈನಂದಿನ ಗಳಿಕೆಯ ಹೆಚ್ಚಿನ ಭಾಗ ಇಂಧನಕ್ಕಾಗಿಯೇ ವ್ಯಯಿಸುವಂತಾಗಿದೆ.