ಬೆಂಗಳೂರು: ಪತಿ, ಆತನ ಸ್ನೇಹಿತ, ಮೈದುನ, ಮಾವನಿಂದ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯಕ್ಕೊಳಗಾಗಿರುವ ಸೇವ್ ಇಂಡಿಯಾ ಫೌಂಡೇಶನ್ ಸಂಸ್ಥಾಪಕ ಪ್ರೀತ್ ಸಿಂಗ್ ಅವರ ಪತ್ನಿಗೆ ನ್ಯಾಯದೊರಕಿಸಿ ಕೊಡಬೇಕು ಹಾಗೂ ಪ್ರೀತ್ ಸಿಂಗ್ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಎಂದು ನ್ಯಾಷನಲ್ ವುಮೆನ್ಸ್ ಫ್ರಂಟ್ ಒತ್ತಾಯಿಸಿದೆ.
ಈ ಬಗ್ಗೆ ನ್ಯಾಷನಲ್ ವುಮೆನ್ಸ್ ಫ್ರಂಟ್ (NWF) ಕಾರ್ಯದರ್ಶಿ ಶಿಫಾ ಬಾನು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದು, ಆರೆಸ್ಸೆಸ್ ಮುಸ್ಲಿಮ್ ಮಹಿಳೆಯರನ್ನು ಅತ್ಯಾಚಾರಕ್ಕೊಳಪಡಿಸುವ ಬೆದರಿಕೆವೊಡ್ಡಿದ ಬಳಿಕ ಯಾವುದೇ ಮಹಿಳೆ ತನ್ನ ಧರ್ಮ, ಜಾತಿ ಅಥವಾ ಸ್ಥಾನಮಾನದ ಹೊರತಾಗಿಯೂ ಸುರಕ್ಷಿತವಲ್ಲ. ಅಸಹ್ಯಕರ ಲೈಂಗಿಕ ಶೋಷಣೆಯಿಂದ ಅವರ ಸ್ವಂತ ಮನೆಯ ಮಹಿಳೆಯರು ಕೂಡ ಸುರಕ್ಷಿತವಾಗಿಲ್ಲ ಎಂಬುದು ಸಾಬೀತಾಗಿದೆ. ಸೇವ್ ಇಂಡಿಯಾ ಫೌಂಡೇಶನ್ ಸಂಸ್ಥಾಪಕ ಪ್ರೀತ್ ಸಿಂಗ್ ಅವರ ಪತ್ನಿ ಕಳೆದ 2 ವರ್ಷಗಳಿಂದ ಪತಿ, ಆತನ ಸ್ನೇಹಿತ, ಮೈದುನ, ಮಾವನಿಂದ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯಕ್ಕೊಳಗಾಗಿದ್ದಾರೆ. ಸದ್ಯ ಪ್ರೀತ್ ಸಿಂಗ್ ಅವರು ಈಗಾಗಲೇ ದ್ವೇಷ ಭಾಷಣದ ಪ್ರಕರಣದಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದು, ಇದೀಗ ತನ್ನ ತಂದೆಯೊಂದಿಗೆ ತಲೆಮರೆಸಿಕೊಂಡಿದ್ದಾರೆ.
ಈ ನಿಟ್ಟಿನಲ್ಲಿ ಸಂತ್ರಸ್ತೆಗೆ ತಕ್ಷಣ ನ್ಯಾಯವನ್ನು ಒದಗಿಸಬೇಕು. ಪ್ರೀತ್ ಸಿಂಗ್ ಮತ್ತು ಆತನ ಕುಟುಂಬಕ್ಕೆ ಕಠಿಣ ಶಿಕ್ಷೆ ವಿಧಿಸಬೇಕು. ಅಲ್ಲದೆ ಸೇವ್ ಇಂಡಿಯಾ ಫೌಂಡೇಶನ್ ಎಂಬ ಸಂಸ್ಥೆಯ ವಿರುದ್ಧ ತಕ್ಷಣ ಸಿಬಿಐ ತನಿಖೆ ನಡೆಸಬೇಕೆಂದು ಶಿಫಾ ಬಾನು ಆಗ್ರಹಿಸಿದ್ದಾರೆ.
ಭಾರತವನ್ನು ಸಂರಕ್ಷಿಸುವುದು ಈ ರೀತಿಯೇ? ಈ ಕ್ರೂರ ಮೃಗಗಳ ಕೈಯಲ್ಲಿ ಭಾರತದ ಭವಿಷ್ಯ ಅವಲಂಬಿತವಾಗಿದೆಯೇ?. ಇಂತಹ ನೀಚತನದ ಎದುರು ಸಮಾಜ ಯಾಕೆ ಮೌನವಾಗಿದೆ. ಸೇವ್ ಇಂಡಿಯಾ ಫೌಂಡೇಶನ್ ನ ಕಾರ್ಯವೈಖರಿ ನಿಜವಾಗಿಯೂ ವಿಪರ್ಯಾಸವಾಗಿದೆ. ಕಾರಣ ಮಹಿಳೆಯರು ಸುರಕ್ಷಿತರಾಗಿದ್ದಾಗ ಮಾತ್ರ ರಾಷ್ಟ್ರವನ್ನು ಸುರಕ್ಷಿತವೆಂದು ಪರಿಗಣಿಸಲಾಗುತ್ತದೆ. ಪ್ರತಿಯೊಬ್ಬ ಭಾರತೀಯ ಮಹಿಳೆಯು ಈ ಅನಾರೋಗ್ಯ ಪೀಡಿತ ಸಂಘಿಗಳ ಪಿತೂರಿಗಳ ಬಗ್ಗೆ ತಿಳಿದಿರಬೇಕು ಮತ್ತು ಇಂತಹ ಅಸಹ್ಯಕರ ಕುಕೃತ್ಯಕ್ಕೆ ಬಲಿಯಾಗದಂತೆ ಎಚ್ಚರಿಕೆವಹಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.