ಬಿಹಾರದಲ್ಲಿ ನರ್ಸೊಬ್ಬಳು ಸಿರಿಂಜ್ ಗೆ ಲಸಿಕೆ ತುಂಬಿಸದೇ ವ್ಯಕ್ತಿಯೊಬ್ಬನಿಗೆ ಇಂಜೆಕ್ಟ್ ಮಾಡಿದ್ದು, ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ನರ್ಸ್ ಸಿರಿಂಜ್ ಗೆ ಲಸಿಕೆ ತುಂಬದೇ ಇಂಜೆಕ್ಷನ್ ನಿಡುತ್ತಿರುವುದು ವೀಡಿಯೋದಲ್ಲಿ ಕಾಣಬಹುದು. ಇದು ಜೂನ್ 21ರಂದು ಬಿಹಾರದ ಛಾಪ್ರಾ ಜಿಲ್ಲೆಯಲ್ಲಿ ನಡೆದ ಘಟನೆ ಎಂದು ಹೇಳಲಾಗಿದ್ದು, ಮಾತನಾಡುತ್ತಿದ್ದಂತೆಯೇ ಸಿರಿಂಜ್ ನ್ನು ಕೈಗೆ ತೆಗೆದುಕೊಂಡ 48 ವರ್ಷದ ನರ್ಸ್ ಚಂದ ಕುಮಾರಿ, ಲಸಿಕೆಯನ್ನು ತುಂಬದೇ ವ್ಯಕ್ತಿಗೆ ಇಂಜೆಕ್ಷನ್ ನೀಡಿದ್ದಾರೆ!
ವೀಡಿಯೋ ವೀಕ್ಷಿಸಿ….
ಪ್ಲಾಸ್ಟಿಕ್ ಕವರ್ನಿಂದ ಸಿರಿಂಜ್ ನ್ನು ಹೊರತೆಗೆದ ನರ್ಸ್ ಅದರಲ್ಲಿ ಲಸಿಕೆಯನ್ನ ತುಂಬದೇ ನನಗೆ ಇಂಜೆಕ್ಟ್ ಮಾಡಿದ್ದಾರೆ ಎಂದು 20 ವರ್ಷದ ಅಝರ್ ಎಂಬ ಯುವಕ ಆರೋಪಿಸಿದ್ದಾರೆ. ಅಝರ್ ಸ್ನೇಹಿತ ಈ ವಿಡಿಯೋ ಚಿತ್ರೀಕರಿಸಿದ್ದು ವಿಡಿಯೋ ನೋಡಿದ ಬಳಿಕ ಅಝರ್ ಶಾಕ್ ಆಗಿದ್ದಾರೆ. ಈ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.