Home ಟಾಪ್ ಸುದ್ದಿಗಳು ಮಹಾರಾಷ್ಟ್ರ ಪೊಲೀಸರಿಂದ ಬಂಧನ ಭೀತಿ : ದೆಹಲಿಯಿಂದಲೇ ಪರಾರಿಯಾದ ಮತಾಂಧೆ ನೂಪುರ್ ಶರ್ಮಾ !

ಮಹಾರಾಷ್ಟ್ರ ಪೊಲೀಸರಿಂದ ಬಂಧನ ಭೀತಿ : ದೆಹಲಿಯಿಂದಲೇ ಪರಾರಿಯಾದ ಮತಾಂಧೆ ನೂಪುರ್ ಶರ್ಮಾ !

ನವದೆಹಲಿ:  ಪ್ರವಾದಿ ಮೊಹಮ್ಮದ್  ಪೈಗಂಬರ್‌ ಅವರ  ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಬಿಜೆಪಿಯ ಉಚ್ಛಾಟಿತ ನಾಯಕಿ ನೂಪುರ್‌ ಶರ್ಮ ಬಂಧನ ಭೀತಿಯಿಂದ ದೆಹಲಿಯಿಂದ ಪರಾರಿಯಾಗಿದ್ದಾಳೆ.  ಮಹಾರಾಷ್ಟ್ರ ಪೊಲೀಸರು ದೆಹಲಿಯಲ್ಲಿ 5 ದಿನಗಳಿಂದ ಬೀಡುಬಿಟ್ಟಿದ್ದಾರೆ. ನೂಪುರ್‌ ಶರ್ಮಾಳ ಬಂಧನಕ್ಕೆ  ಆಗ್ರಹಿಸಿ ದೇಶದ ನಾನಾ ಕಡೆ ಪ್ರತಿಭಟನೆ ಗಳು ನಡೆದಿದ್ದು, ಉತ್ತರ ಪ್ರದೇಶದಲ್ಲಿ ಕಲ್ಲು ತೂರಾಟ ಹಾಗೂ ವಾಹನಗಳಿಗೆ ಬೆಂಕಿ ಹಚ್ಚಿದ್ದರಿಂದ ಪ್ರತಿಭಟನೆ ಹಿಂಸಾರೂಪ ಪಡೆದಿತ್ತು.

ಇದೆಲ್ಲದರ ನಡುವೆ ನೂಪುರ್‌ ಶರ್ಮ ನಾಪತ್ತೆಯಾಗಿದ್ದು, ಎಲ್ಲಿದ್ದಾಳೆ ಎಂದು ಪತ್ತೆ ಹಚ್ಚಲು ಪೊಲೀಸರಿಗೆ ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ  ಮಹಾರಾಷ್ಟ್ರ ಪೊಲೀಸರು ದೆಹಲಿಯಲ್ಲಿ ಕಳೆದ 5 ದಿನಗಳಿಂದ ಬೀಡು ಬಿಟ್ಟಿದ್ದಾರೆ.

ನೂಪುರ್‌ ಬಂಧನಕ್ಕೆ ಬೇಕಾದ ಎಲ್ಲಾ ಸಾಕ್ಷ್ಯಗಳು ನಮ್ಮ ಬಳಿ ಇವೆ. ಆದರೆ ಅವಳು ಎಲ್ಲಿ ಅಡಗಿದ್ದಾಳೆ ಎಂಬುದು ತಿಳಿಯುತ್ತಿಲ್ಲ. ಶೀಘ್ರದಲ್ಲೇ ಅವರನ್ನು ಬಂಧಿಸುವ ವಿಶ್ವಾಸವಿದೆ ಎಂದು ಮಹಾರಾಷ್ಟ್ರ  ಪೊಲೀಸರು ತಿಳಿಸಿದ್ದಾರೆ.

Join Whatsapp
Exit mobile version