Home ಟಾಪ್ ಸುದ್ದಿಗಳು ಇನ್ನು ಮುಂದೆ ಅಂತರಾಷ್ಟ್ರೀಯ ವಿಮಾನ ಪ್ರಯಾಣಕ್ಕೆ QR ‌ಕೋಡ್‌ ಇರುವ RTPCR ನೆಗೆಟಿವ್‌ ವರದಿ ಕಡ್ಡಾಯ

ಇನ್ನು ಮುಂದೆ ಅಂತರಾಷ್ಟ್ರೀಯ ವಿಮಾನ ಪ್ರಯಾಣಕ್ಕೆ QR ‌ಕೋಡ್‌ ಇರುವ RTPCR ನೆಗೆಟಿವ್‌ ವರದಿ ಕಡ್ಡಾಯ

ಸಾಂದರ್ಭಿಕ ಚಿತ್ರ

ಭಾರತದಿಂದ ಇತರೆ ದೇಶಗಳಿಗೆ ಪ್ರಯಾಣಿಸುವವರು ಇಂದಿನಿಂದ ತಮ್ಮ ಜೊತೆ ಕ್ಯೂಆರ್‌ ‌ಕೋಡ್‌ ಹೊಂದಿರುವ ಆರ್‌‌ಟಿಪಿಸಿಆರ್‌‌ ನೆಗೆಟಿವ್‌ ವರದಿ ಕಡ್ಡಾಯವಾಗಿ ತರಬೇಕು” ಎಂದು ನಾಗರೀಕ ವಿಮಾನಯಾನ ಸಚಿವಾಲಯ ತಿಳಿಸಿದೆ. ಕಳೆದ ವಾರ ಈ ಬಗ್ಗೆ ಮಾಹಿತಿ ನೀಡಿದ್ದ ನಾಗರೀಕ ವಿಮಾನಯಾನ ಸಚಿವಾಲಯ, “ಕ್ಯೂಆರ್‌‌ಕೋಡ್‌ ಹೊಂದಿರುವ ಆರ್‌‌ಟಿಪಿಸಿಆರ್‌‌ ನೆಗೆಟಿವ್‌ ಹೊಂದಿರುವವರಿಗೆ ಮಾತ್ರವೇ ಅಂತರಾಷ್ಟ್ರೀಯ ಪ್ರಯಾಣಕ್ಕೆ ಅನುಮತಿ ಕಲ್ಪಿಸುವಂತೆ ವಿಮಾನ ಸಂಸ್ಥೆಗಳಿಗೆ ಸೂಚಿಸಲಾಗಿತ್ತು. ಇದು ಮೇ.22ರಿಂದ ಭಾರತದಿಂದ ಹೊರಡುವ ಎಲ್ಲಾ ವಿಮಾನಗಳಿಗೆ ಅನ್ವಯವಾಗಲಿದೆ” ಎಂದು ಹೇಳಿತ್ತು.

ವಿಮಾನ ಪ್ರಯಾಣದ ವೇಳೆ ಹಲವಾರು ಮಂದಿ ನಕಲಿ ಕೊರೊನಾ ಪರೀಕ್ಷಾ ವರದಿ ನೀಡುತ್ತಿರುವ ವಿಚಾರ ತಿಳಿದುಬಂದಿದ್ದು, ಈ ಕುರಿತು ಕ್ರಮ ತೆಗೆದುಕೊಳ್ಳಲಾಗಿದೆ. ಪ್ರಯಾಣಿಕರ ಮೂಲ ವರದಿಗೆ ಕ್ಯೂಆರ್‌‌ ಕೋಡ್‌ ಲಿಂಕ್‌‌ ಆಗಿದ್ದು, ಇದರಿಂದ ನಿಖರತೆ ತಿಳಿಯುತ್ತದೆ” ಎಂದು ಹೇಳಿದೆ.
ಕಳೆದ ವರ್ಷ ಮಾರ್ಚ್ 23ರಿಂದ ಕೊರೊನಾ ಸೋಂಕು ಹಿನ್ನೆಲೆಯಲ್ಲಿ ಅಂತರಾಷ್ಟ್ರೀಯ ಪ್ರಯಾಣಿಕ ವಿಮಾನ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು. ಆದರೆ, ಕೆಲ ಆಯ್ದ ದೇಶಗಳಿಗೆ ಮಾತ್ರವೇ ವಂದೇ ಭಾರತ್‌‌ ಮಿಷನ್‌ ಅಡಿ ವಿಶೇಷ ಅಂತರಾಷ್ಟ್ರೀಯ ವಿಮಾನಗಳು ಹಾರಾಟ ನಡೆಸುತ್ತಿದ್ದವು.

Join Whatsapp
Exit mobile version