Home ಟಾಪ್ ಸುದ್ದಿಗಳು ಬಿಜೆಪಿ ಮುಖಂಡನಿಂದ ದೂರು | ಎಎಂಯು ವಿದ್ಯಾರ್ಥಿ ನಾಯಕ ಶರ್ಜೀಲ್‌ ಉಸ್ಮಾನಿ ವಿರುದ್ಧ ಎಫ್‌ ಐಆರ್

ಬಿಜೆಪಿ ಮುಖಂಡನಿಂದ ದೂರು | ಎಎಂಯು ವಿದ್ಯಾರ್ಥಿ ನಾಯಕ ಶರ್ಜೀಲ್‌ ಉಸ್ಮಾನಿ ವಿರುದ್ಧ ಎಫ್‌ ಐಆರ್

ನವದೆಹಲಿ : ದಿವಂಗತ ಪತ್ರಕರ್ತ ರೋಹಿತ್‌ ಸರ್ದಾನ ಮತ್ತು ಶ್ರೀರಾಮನ ಬಗ್ಗೆ ನಿಂದನಾತ್ಮಕ ಮತ್ತು ಆಕ್ಷೇಪಾರ್ಹ ಟ್ವೀಟ್‌ ಮಾಡಿದ್ದಾರೆಂದು ಆಪಾದಿಸಿ ಬಿಜೆಪಿ ನಾಯಕರೊಬ್ಬರು ನೀಡಿರುವ ದೂರಿನ ಆಧಾರದಲ್ಲಿ ಆಲಿಗಢ ಮುಸ್ಲಿಂ ಯುನಿವರ್ಸಿಟಿಯ ವಿದ್ಯಾರ್ಥಿ ನಾಯಕ ಶರ್ಜೀಲ್‌ ಉಸ್ಮಾನಿ ವಿರುದ್ಧ ದೆಹಲಿ ಪೊಲೀಸರು ಎಫ್‌ ಐಆರ್‌ ದಾಖಲಿಸಿದ್ದಾರೆ.

ದೆಹಲಿ ಬಿಜೆಪಿ ಮಾಧ್ಯಮ ಮುಖ್ಯಸ್ಥ ನವೀನ್‌ ಕುಮಾರ್‌ ನೀಡಿರುವ ದೂರಿನ ಹಿನ್ನೆಲೆಯಲ್ಲಿ ಈ ಪ್ರಕರಣ ದಾಖಲಾಗಿದೆ. ಲಕ್ಷ್ಮಿ ನಗರ ಪೊಲೀಸ್‌ ಠಾಣೆಯಲ್ಲಿ ಕುಮಾರ್‌ ದೂರು ದಾಖಲಿಸಿದ್ದರು.

ಈ ಟ್ವೀಟ್‌ ಗಳು ಧಾರ್ಮಿಕ ಸಮುದಾಯಗಳ ನಡುವೆ ದ್ವೇಷ ಮತ್ತು ಅಭದ್ರತೆಯ ಭಾವನೆಯನ್ನು ಹುಟ್ಟು ಹಾಕುವಂತಿವೆ ಎಂದು ದೂರಿನಲ್ಲಿ ಆಪಾದಿಸಲಾಗಿದೆ.

ಗುರುವಾರ ಮಹಾರಾಷ್ಟ್ರದ ಜಲ್ನಾದಲ್ಲೂ ಉಸ್ಮಾನಿ ವಿರುದ್ಧ ಎಫ್‌ ಐಆರ್‌ ದಾಖಲಾಗಿತ್ತು. ಹಿಂದೂ ಜಾಗರಣ ಮಂಚ್‌ ನ ಸದಸ್ಯರೊಬ್ಬರು ನೀಡಿರುವ ದೂರಿನ ಆಧಾರದಲ್ಲಿ ಪ್ರಕರಣ ದಾಖಲಾಗಿತ್ತು.

Join Whatsapp
Exit mobile version