Home ಟಾಪ್ ಸುದ್ದಿಗಳು ಸಿದ್ದಾಂತ್ ಭಾಗಿಯಾಗಿದ್ದ ಪಾರ್ಟಿಯಲ್ಲಿದ್ದ ವಿದೇಶಿ ಮಾಡೆಲ್ ಗಳಿಗೆ ನೋಟಿಸ್ ಜಾರಿ

ಸಿದ್ದಾಂತ್ ಭಾಗಿಯಾಗಿದ್ದ ಪಾರ್ಟಿಯಲ್ಲಿದ್ದ ವಿದೇಶಿ ಮಾಡೆಲ್ ಗಳಿಗೆ ನೋಟಿಸ್ ಜಾರಿ

ಬೆಂಗಳೂರು: ಹಲಸೂರಿನ ಐಷಾರಾಮಿ ಪಾರ್ಕ್ ಹೋಟೆಲ್ ನಲ್ಲಿ ಬಾಲಿವುಡ್ ನಟ ಶಕ್ತಿ ಕಪೂರ್ ಪುತ್ರ ಸಿದ್ದಾಂತ್ ಭಾಗಿಯಾಗಿದ್ದ ಮೋಜು ಮಸ್ತಿ ಪಾರ್ಟಿಯಲ್ಲಿದ್ದ ವಿದೇಶಿ ಮಾಡೆಲ್ ಗಳಿಗೆ ಪೂರ್ವ ವಿಭಾಗದ ಪೊಲೀಸರು ನೋಟೀಸ್ ಜಾರಿ ಮಾಡಿದ್ದಾರೆ.

ಪಾರ್ಟಿಯಲ್ಲಿ ಪಾಲ್ಗೊಂಡ ಕೆಲ ವಿದೇಶಿಗರ ವೀಸಾ ಅವಧಿ ಮುಗಿದಿದ್ದರೆ, ಮತ್ತೆ ಕೆಲ ಮಾಡೆಲ್ ಗಳ ವ್ಯವಹಾರದ ಮೇಲೆ ಅನುಮಾನ ಮೂಡಿದ್ದರಿಂದ ಪೊಲೀಸರು ನೋಟೀಸ್ ಜಾರಿ ಮಾಡಿ ವಿಚಾರಣೆಗೆ ಮುಂದಾಗಿದ್ದಾರೆ.

ಪಾರ್ಕ್ ಹೊಟೇಲ್ ನ ಮೋಜು ಮಸ್ತಿ  ಪಾರ್ಟಿಯಲ್ಲಿ ಡ್ರಗ್ಸ್ ಬಂದಿದ್ದಾದರೂ ಹೇಗೆ ಎನ್ನುವುದು ಇನ್ನೂ ನಿಗೂಢವಾಗಿಯೇ ಉಳಿದಿದೆ. ಪಾರ್ಟಿಗೆ ಡ್ರಗ್ಸ್ ತಂದವರು ಯಾರು ಎನ್ನುವುದು ಕೂಡ ಪೊಲೀಸರಿಗೆ ತಲೆನೋವು ತಂದಿದೆ.

ಸುಮಾರು 150 ಮಂದಿಯಿದ್ದ ಪಾರ್ಟಿಗೆ ಡ್ರಗ್ಸ್ ತಂದವರು ಯಾರು ಎನ್ನುವುದನ್ನು ಪತ್ತೆ ಹಚ್ಚಲು ಪೊಲೀಸರು ಅತಿಥಿಗಳ ಪಟ್ಟಿ

(ಗೆಸ್ಟ್ ಲಿಸ್ಟ್) ಯನ್ನು ಪಡೆದಿದ್ದಾರೆ.

Join Whatsapp
Exit mobile version