Home ಟಾಪ್ ಸುದ್ದಿಗಳು ‘ಬೈಬಲ್’ ಪದ ಬಳಕೆ: ನಟಿ ಕರೀನಾ ಕಪೂರ್ ಗೆ ನೋಟಿಸ್

‘ಬೈಬಲ್’ ಪದ ಬಳಕೆ: ನಟಿ ಕರೀನಾ ಕಪೂರ್ ಗೆ ನೋಟಿಸ್

ಜಬಲಪುರ: ಗರ್ಭಧಾರಣೆಗೆ (ಪ್ರಗ್ನೆನ್ಸಿ) ಸಂಬಂಧಿಸಿದಂತೆ ಬರೆದ ಪುಸ್ತಕದ ಶೀರ್ಷಿಕೆಯಲ್ಲಿ ‘ಬೈಬಲ್’ ಪದ ಬಳಕೆ ಮಾಡಿದ ಸಂಬಂಧ ಮಧ್ಯಪ್ರದೇಶ ಹೈಕೋರ್ಟ್ ಬಾಲಿವುಡ್ ನಟಿ ಕರೀನಾ ಕಪೂರ್ ಅವರಿಗೆ ನೋಟಿಸ್ ನೀಡಿದೆ.

2021ರಲ್ಲಿ ‘ಕರೀನಾ ಕಪೂರ್ ಪ್ರೆಗ್ನೆನ್ಸಿ ಬೈಬಲ್: ದಿ ಅಲ್ಟಿಮೇಟ್ ಮ್ಯಾನ್ಯುಯಲ್ ಫಾರ್ ಮಾಮ್ಸ್-ಟು-ಬಿ’ ಪುಸ್ತಕ ಬಿಡುಗಡೆಯಾಗಿದ್ದು, ಗರ್ಭಧಾರಣೆ ಸಂಬಂಧಿಸಿದ ಅನುಭವಗಳನ್ನು ಈ ಪುಸ್ತಕದಲ್ಲಿ ಹಂಚಿಕೊಂಡಿದ್ದರು. ಪುಸ್ತಕದ ಶೀರ್ಷಿಕೆ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿದ ವಕೀಲ ಕ್ರಿಸ್ಟೋಫರ್ ಆ್ಯಂಟನಿ, ಶೀರ್ಷಿಕೆಯಿಂದ ‘ಬೈಬಲ್‘ ಪದವನ್ನು ತೆಗೆದುಹಾಕುವಂತೆ ಮನವಿ ಮಾಡಿದ್ದರು. ಅಲ್ಲದೇ ಇದು ಕ್ರಿಶ್ಚಿಯನ್ ಸಮುದಾಯದ ಭಾವನೆಗಳಿಗೆ ನೋವುಂಟು ಮಾಡಿದೆ ಎಂದು ತಿಳಿಸಿದ್ದರು.


ಅರ್ಜಿ ವಿಚಾರಣೆ ಮಾಡಿದ ನ್ಯಾಯಮೂರ್ತಿ ಜಿ.ಎಸ್. ಅಹ್ಲುವಾಲಿಯಾ ಅವರಿದ್ದ ಏಕಸದಸ್ಯ ಪೀಠ ನೋಟಿಸ್ ಜಾರಿ ಮಾಡಿದೆ.

Join Whatsapp
Exit mobile version