Home ರಾಷ್ಟ್ರೀಯ ಹೆದ್ದಾರಿಗಳಲ್ಲಿ 20 ಕಿ.ಮೀ.ವರೆಗೆ ಪ್ರಯಾಣಕ್ಕೆ ಟೋಲ್ ಇಲ್ಲ..!

ಹೆದ್ದಾರಿಗಳಲ್ಲಿ 20 ಕಿ.ಮೀ.ವರೆಗೆ ಪ್ರಯಾಣಕ್ಕೆ ಟೋಲ್ ಇಲ್ಲ..!

►NH ಹೊಸ ನಿಯಮಗಳ ಬಗ್ಗೆ ಇಲ್ಲಿದೆ ಮಾಹಿತಿ


ನವದೆಹಲಿ: ಗ್ಲೋಬಲ್ ನ್ಯಾವಿಗೇಷನ್ ಸ್ಯಾಟಲೈಟ್ ಸಿಸ್ಟಮ್ (ಜಿಎನ್ ಎಸ್ ಎಸ್) ಆಧಾರಿತ ಟೋಲ್ ಸಂಗ್ರಹ ಜಾರಿಯಾದಲ್ಲಿ ಹೆದ್ದಾರಿ ಹಾಗೂ ಎಕ್ಸ್ ಪ್ರೆಸ್ ವೇ ಗಳಲ್ಲಿ ಸಂಚರಿಸುವ ಖಾಸಗಿ ವಾಹನಗಳಿಗೆ 20 ಕಿ.ಮೀ ವರೆಗೂ ಶೂನ್ಯ ಟೋಲ್ ದರ ಜಾರಿಯಾಗಲಿದೆ.

ಹೊಸ ನಿಯಮಗಳ ಅನ್ವಯ, ‘ಮೊದಲಿನ 20 ಕಿ.ಮೀ ದೂರ ಪ್ರಯಾಣದವರೆಗೆ ಟೋಲ್ ಅನ್ವಯಿಸದು. 20 ಕಿ.ಮೀ. ದಾಟಿದ ನಂತರ ವಾಹನವು ಪ್ರಯಾಣಿಸಿದ ದೂರಕ್ಕೆ ಮಾತ್ರವೇ ಶುಲ್ಕ ಕಡಿತ ಮಾಡಲಾಗುತ್ತದೆ. 20 ಕಿ.ಮೀ. ಎಂಬುದು 1 ದಿನದ ಕೋಟಾ ಆಗಿದ್ದು, ಪ್ರತಿದಿನ 20 ಕಿ.ಮೀ.ನಷ್ಟು ಉಚಿತವಾಗಿ ಸಂಚರಿಸಬಹುದಾಗಿದೆ. ಜೊತೆಗೆ ಎರಡೂ ದಿಕ್ಕಿನಲ್ಲಿ ಮಾಡುವ ಎರಡೂ ಪ್ರತ್ಯೇಕ ಪ್ರಯಾಣಕ್ಕೂ ಈ ನಿಯಮ ಅನ್ವಯಿಸುತ್ತದೆ. ಈ ಹಿಂದಿನಂತೆ ಇಡೀ ಟೋಲ್ ವ್ಯಾಪ್ತಿಗೆ ಒಳಪಟ್ಟ ಅಷ್ಟೂ ದೂರಕ್ಕೆ ಶುಲ್ಕ ವಸೂಲಿ ಮಾಡುವುದಿಲ್ಲ’ ಎಂದು ಸರ್ಕಾರ ಮಾಹಿತಿ ನೀಡಿದೆ.

ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯ ರಾಷ್ಟ್ರೀಯ ಹೆದ್ದಾರಿ ಶುಲ್ಕ (ದರಗಳು ಮತ್ತು ಸಂಗ್ರಹಣೆಯ ನಿರ್ಣಯ) ನಿಯಮಗಳು, 2008 ಕ್ಕೆ ತಿದ್ದುಪಡಿ ತಂದಿದ್ದು, ಹೊಸ ನಿಯಮಗಳ ಪ್ರಕಾರ, 20 ಕಿಮೀ ಗೂ ಹೆಚ್ಚು ಕ್ರಮಿಸಿದರೆ, ವಾಹನಗಳು ವಾಸ್ತವದಲ್ಲಿ ಸಂಚರಿಸಿದ ದೂರಕ್ಕೆ ಮಾತ್ರ ಶುಲ್ಕ ವಿಧಿಸಲಾಗುತ್ತದೆ.


ಅಸ್ತಿತ್ವದಲ್ಲಿರುವ ಸ್ವಯಂಚಾಲಿತ ನಂಬರ್ ಪ್ಲೇಟ್ ರೆಕಗ್ನಿಷನ್ (ANPR) ಸಾಧನ ಅಥವಾ FASTag ವಿಧಾನಗಳ ಜೊತೆಗೆ ಉಪಗ್ರಹ ಆಧಾರಿತ ವ್ಯವಸ್ಥೆಗಳ ಮೂಲಕ ಎಲೆಕ್ಟ್ರಾನಿಕ್ ಟೋಲ್ ಸಂಗ್ರಹಣೆಯನ್ನು ಸಂಯೋಜಿಸಲು ನಿಯಮಗಳನ್ನು ಪರಿಷ್ಕರಿಸಲಾಗಿದೆ.


ರಾಷ್ಟ್ರೀಯ ಹೆದ್ದಾರಿ, ಶಾಶ್ವತ ಸೇತುವೆ, ಬೈಪಾಸ್ ಅಥವಾ ಸುರಂಗದ ಅದೇ ವಿಭಾಗವನ್ನು ಬಳಸುವ ರಾಷ್ಟ್ರೀಯ ಪರ್ಮಿಟ್ ವಾಹನವನ್ನು ಹೊರತುಪಡಿಸಿ ಯಾಂತ್ರಿಕ ವಾಹನದ ಚಾಲಕ, ಮಾಲೀಕರು ಅಥವಾ ಉಸ್ತುವಾರಿ ವ್ಯಕ್ತಿಗೆ ಗ್ಲೋಬಲ್ ನ್ಯಾವಿಗೇಷನ್ ಸ್ಯಾಟಲೈಟ್ ಸಿಸ್ಟಮ್ ಆಧಾರಿತ ಬಳಕೆದಾರ ಶುಲ್ಕ ಸಂಗ್ರಹ ವ್ಯವಸ್ಥೆಯಡಿಯಲ್ಲಿ ಒಂದು ದಿನದಲ್ಲಿ ಪ್ರತಿ ದಿಕ್ಕಿನಲ್ಲಿ 20 ಕಿಲೋಮೀಟರ್ ಪ್ರಯಾಣದವರೆಗೆ ಶೂನ್ಯ ಶುಲ್ಕ ಬಳಕೆದಾರರ ಶುಲ್ಕ ವಿಧಿಸಲಾಗುತ್ತದೆ ”ಎಂದು ಸಚಿವಾಲಯದ ಅಧಿಸೂಚನೆ ಹೇಳಿದೆ.


ಜಿಎನ್ ಎಸ್ ಎಸ್ ವ್ಯವಸ್ಥೆಯನ್ನು ಕೇಂದ್ರ ಸರ್ಕಾರ ಈಗಾಗಲೇ ಬೆಂಗಳೂರು- ಮೈಸೂರು ರಾಷ್ಟ್ರೀಯ ಹೆದ್ದಾರಿ ಮತ್ತು ಹರ್ಯಾಣದ ಪಾಣಿಪತ್- ಹಿಸಾರ್ ಮಾರ್ಗಗಳಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತಂದಿದೆ.

Join Whatsapp
Exit mobile version