ಯಾವ ತಂಡವನ್ನೂ ಲಘುವಾಗಿ ಪರಿಗಣಿಸಿಲ್ಲ: ಮೊದಲ ಸೋಲಿನ ಬಳಿಕ ಕ್ಲಾಸೆನ್

- Advertisement -

- Advertisement -

ಹೈದರಾಬಾದ್‌: ಸನ್‌ರೈಸರ್ಸ್‌ ಹೈದರಾಬಾದ್ (ಎಸ್‌ ಆರ್‌ ಎಚ್‌), ಯಾವುದೇ ತಂಡವನ್ನು ಲಘುವಾಗಿ ಪರಿಗಣಿಸಿಲ್ಲ ಎಂದು ಹೆನ್ರಿಚ್‌ ಕ್ಲಾಸೆನ್‌ ಹೇಳಿದ್ದಾರೆ.

ಲಖನೌ ಸೂಪರ್‌ ಜೈಂಟ್ಸ್‌ (ಎಲ್‌ಎಸ್‌ಜಿ) ವಿರುದ್ಧ ಗುರುವಾರ ರಾತ್ರಿ ನಡೆದ ಪಂದ್ಯದಲ್ಲಿ ಎದುರಾದ ಐದು ವಿಕೆಟ್‌ ಅಂತರದ ಸೋಲಿನ ಬಳಿಕ ಮಾತನಾಡಿರುವ ಅವರು, ಎಲ್ಲ ತಂಡಗಳೂ ಉತ್ತಮವಾಗಿ ಆಡುತ್ತಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ.

- Advertisement -

ಹೈದರಾಬಾದ್‌ನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಎಸ್‌ಆರ್‌ಎಚ್‌, ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 190 ರನ್‌ ಗಳಿಸಿತ್ತು. ಈ ಗುರಿ ಬೆನ್ನತ್ತಿದ ಎಲ್‌ಎಸ್‌ಜಿ, 16.1 ಓವರ್‌ಗಳಲ್ಲಿ 193 ರನ್‌ ಗಳಿಸಿ ಗೆಲುವು ಸಾಧಿಸಿತು.

ಉಭಯ ತಂಡಗಳು ಟೂರ್ನಿಯಲ್ಲಿ ತಲಾ ಎರಡು ಪಂದ್ಯಗಳಲ್ಲಿ ಆಡಿವೆ. ಎಸ್‌ಆರ್‌ಎಚ್‌ ತನ್ನ ಮೊದಲ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಎದುರು 44 ರನ್‌ ಗಳಿಂದ ಗೆದ್ದಿತ್ತು. ಡೆಲ್ಲಿ ಕ್ಯಾಪಿಟಲ್ಸ್‌ ಎದುರು 1 ವಿಕೆಟ್‌ ಅಂತರದ ಸೋಲು ಅನುಭವಿಸಿದ್ದ ಎಲ್‌ಎಸ್‌ಜಿಗೆ ಇದು ಮೊದಲ ಜಯ.

ಪಂದ್ಯದ ನಂತರ ಮಾತನಾಡಿದ ಕ್ಲಾಸೆನ್‌, ‘ನಾವು (ಎಸ್‌ಆರ್‌ಎಚ್‌) ಐಪಿಎಲ್‌ನಲ್ಲಿ ಯಾವುದೇ ತಂಡವನ್ನು ಲಘುವಾಗಿ ಪರಿಗಣಿಸಿಲ್ಲ. ಎಲ್ಲರೂ, ಅದಲ್ಲೂ ಮುಖ್ಯವಾಗಿ ಇಂತಹ ವಿಕೆಟ್‌ಗಳಲ್ಲಿ ಉತ್ತಮ ಆಟವಾಡುತ್ತಿದ್ದಾರೆ. ಈ ರೀತಿಯ ಪಿಚ್‌ಗಳಲ್ಲಿ ಯಾವುದೇ ಬೌಲಿಂಗ್‌ ವಿಭಾಗದ ಮೇಲೆ ಒತ್ತಡ ಹೇರಬಹುದು. ಆದಾಗ್ಯೂ, ಅವರು (ಎಲ್‌ಎಸ್‌ಜಿ) ಮಧ್ಯಮ ಓವರ್‌ಗಳಲ್ಲಿ ಚೆನ್ಣಾಗಿ ಬೌಲಿಂಗ್ ಮಾಡಿದರು. ಹಾಗಾಗಿ, ಅವರಿಗೂ ಶ್ರೇಯ ಸಲ್ಲಬೇಕು. ಅವರು ಆರಂಭದಲ್ಲೇ ವಿಕೆಟ್‌ಗಳನ್ನು ಕಬಳಿಸಿದ್ದರಿಂದ ನಮ್ಮ ವೇಗಕ್ಕೆ ತಡೆ ಬಿತ್ತು. ಇವೆಲ್ಲವೂ ಆಟದ ಭಾಗ’ ಎಂದು ಹೇಳಿದ್ದಾರೆ.

- Advertisement -


Must Read

Related Articles