Home ಕ್ರೀಡೆ ಕುಸ್ತಿ ಫೆಡರೇಶನ್ ಅಮಾನತು ಆಗಿರೋದಕ್ಕೆ ದಾಖಲೆ ಇಲ್ಲ: ಸಾಕ್ಷಿ ಮಲಿಕ್

ಕುಸ್ತಿ ಫೆಡರೇಶನ್ ಅಮಾನತು ಆಗಿರೋದಕ್ಕೆ ದಾಖಲೆ ಇಲ್ಲ: ಸಾಕ್ಷಿ ಮಲಿಕ್

ಭಾರತ ಕುಸ್ತಿ ಫೆಡರೇಶನ್ (ಡಬ್ಲ್ಯುಎಫ್‌ಐ) ಅಮಾನತುಗೊಂಡಿರುವ ಬಗ್ಗೆ ಪ್ರತಿಕ್ರಿಯಿಸಿರುವ ಸಾಕ್ಷಿ ಮಲಿಕ್, ಕ್ರೀಡಾ ಸಚಿವಾಲಯ ನೂತನ ಕುಸ್ತಿ ಮಂಡಳಿಯನ್ನು ಅಮಾನತು ಮಾಡಿದೆ ಏನ್ನುವುದಕ್ಕೆ ಯಾವುದೇ ಲಿಖಿತ ದಾಖಲೆಗಳಿಲ್ಲ. ಇದು ಕೇವಲ ಬಾಯಿ ಮಾತಿನ ಹೇಳಿಕೆ ಎಂದು ಹೇಳಿದ್ದಾರೆ. ಇದೇ ವೇಳೆ, ಕುಸ್ತಿಪಟುಗಳ ಹೋರಾಟ ಸರ್ಕಾರದ ಜತೆ ಅಲ್ಲ ಎಂದು ಹೇಳಿದ್ದಾರೆ.

ಅಸ್ತಿತ್ವದಲ್ಲಿರುವ ನಿಯಮ ಮತ್ತು ನಿಬಂಧನೆಗಳನ್ನು ಹೊಸದಾಗಿ ಆಯ್ಕೆಯಾದ ಕುಸ್ತಿ ಫೆಡರೇಶನ್ ಸಂಪೂರ್ಣ ನಿರ್ಲಕ್ಷಿಸಿದೆ ಎಂದು ಉಲ್ಲೇಖಿಸಿ ಕೇಂದ್ರ ಕ್ರೀಡಾ ಸಚಿವಾಲಯ ಕುಸ್ತಿ ಫೆಡರೇಶನ್ ಆಫ್ ಇಂಡಿಯಾದ ಹೊಸದಾಗಿ ಚುನಾಯಿವಾದ ಸಂಸ್ಥೆಯನ್ನು ಅಮಾನತುಗೊಳಿಸಿತ್ತು.

ಬ್ರಿಜ್​ ಭೂಷಣ್​ ವಿರುದ್ಧ ಲೈಗಿಂಕ ಕಿರುಕುಳದ ಆರೋಪ ಮಾಡಿ ಮೊದಲ ಬಾರಿ ಪ್ರತಿಭಟನೆ ನಡೆಸಿದ್ದ ಮಹಿಳಾ ಕುಸ್ತಿಪಟು ವಿನೇಶ್ ಫೋಗಟ್, ರಾಷ್ಟ್ರೀಯ ಕುಸ್ತಿ ಸಂಘದ ಮಾನ್ಯತೆ ರದ್ದತಿಗೆ ಸಂತಸ ವ್ಯಕ್ತಪಡಿಸಿದ್ದಾರೆ. ಅಮಾನತಿನಿಂದ ಹೊಸ ಭರವಸೆಯ ಕಿರಣ ಮೂಡಿದೆ. ಕ್ರೀಡಾ ಸಚಿವಾಲಯದ ಈ ನಿರ್ಧಾರವು ಮಹಿಳಾ ಕುಸ್ತಿಪಟುಗಳ ಗೆಲುವು ಎಂದು ಫೋಗಟ್ ಬಣ್ಣಿಸಿದ್ದಾರೆ. ಆದರೆ ಸಾಕ್ಷಿ ಮಲಿಕ್ ಈ ಬಗ್ಗೆ ಅಧಿಕೃತ ದಾಖಲೆ ಇಲ್ಲ ಎಂದಿದ್ದಾರೆ.

Join Whatsapp
Exit mobile version