ಗಾಝಾ ಪಟ್ಟಿಯಲ್ಲಿ ನಡೆಯುತ್ತಿರುವ ಸಂಘರ್ಷದಲ್ಲಿ ಇಸ್ರೇಲ್ ವಿಜಯ ಸಾಧಿಸುವುದನ್ನು ಯಾವುದೇ ಶಕ್ತಿ ತಡೆಯಲು ಸಾಧ್ಯವಿಲ್ಲ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ.
ದೂರದರ್ಶನದ ಪತ್ರಿಕಾಗೋಷ್ಠಿಯಲ್ಲಿ, ಮಾತನಾಡಿದ ನೆತನ್ಯಾಹು, ಯಾರೂ ನಮ್ಮನ್ನು ತಡೆಯುವುದಿಲ್ಲ, ವಿಜಯದವರೆಗೂ ಮುಂದುವರಿಯುವುದು ಸಾಧ್ಯ ಮತ್ತು ಅಗತ್ಯವಾಗಿದೆ ಮತ್ತು ನಾವು ಅದನ್ನು ಮಾಡುತ್ತೇವೆ ಎಂದು ಹೇಳಿದ್ದಾರೆ.
ಕದನ ವಿರಾಮ ಘೋಷಿಸಿ ಅಮಯಾಯಕರ ಮಾರಣಹೋಮ ತಪ್ಪಿಸಿ ಸಂತ್ರಸ್ತರ ಚಿಕಿತ್ಸೆ, ಅಗತ್ಯ ಆಹಾರ ನೀರು ಒದಗಿಸಲು ಸಹಕರಿಸಲು ಇಸ್ರೇಲ್ಗೆ ವಿಶ್ವ ಸಂಸ್ಥೆ, ಇತರ ದೇಶಗಳು ಮೇಲಿಂದ ಮೇಲೆ ಸೂಚನೆ ನೀಡುತ್ತಿದ್ದರೂ ಇಸ್ರೇಲ್ ಯುದ್ಧ ಮುಂದುವರೆಯುವ ಘೋಷಣೆ ಮಾಡಿದ್ದು ಉದ್ದಟತನದ ಪರಮಾವಧಿ ಎಂದು ಜಾಗತಿಕವಾಗಿ ವಿಶ್ಲೇಷಿಸಲಾಗಿದೆ.