Home ಟಾಪ್ ಸುದ್ದಿಗಳು ಸಿದ್ದರಾಮಯ್ಯರನ್ನು ಹೊಗಳಿದ ಹೆಚ್.ಡಿ. ದೇವೇಗೌಡ

ಸಿದ್ದರಾಮಯ್ಯರನ್ನು ಹೊಗಳಿದ ಹೆಚ್.ಡಿ. ದೇವೇಗೌಡ

ಬೆಂಗಳೂರು: ಕಾಂಗ್ರೆಸ್ ನಾಯಕರು ಅಯೋಧ್ಯೆ ರಾಮ ಮಂದಿರ ಉದ್ಘಾಟನೆಗೆ ಹೋಗದಿರಲು ನಿರ್ಧರಿಸಿದ್ದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟನೆ ಬಳಿಕ ರಾಮ ಮಂದಿರಕ್ಕೆ ಭೇಟಿ ನೀಡುತ್ತೇನೆ ಎಂದು ಧೈರ್ಯವಾಗಿ ಹೇಳಿದ್ದಾರೆ. ಭೇಸ್..ರಾಮ ಮಂದಿರ ಕುರಿತಾದ ಅವರ ದೃಢ ನಿಲುವುದನ್ನು ಶ್ಲಾಘಿಸುತ್ತೇನೆ ಎಂದು ಜೆಡಿಎಸ್ ವರಿಷ್ಟ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಸಿಎಂರನ್ನು ಹೊಗಳಿದ್ದಾರೆ.

ಸುದ್ಧಿಗೋಷ್ಠಿ ಉದ್ದೇಶಿಸಿ ಮಾತನಾಡಿದ ದೇವೇಗೌಡ, ಜನವರಿ 22ರಂದು ರಾಮ ಮಂದಿರ ಉದ್ಘಾಟನೆ ಆಗಲಿದೆ. ರಾಮ ಮಂದಿರ ಕುರಿತಾದ ಸಿಎಂ ಸಿದ್ದರಾಮಯ್ಯರವರ ದೃಢ ನಿಲುವುದನ್ನು ಶ್ಲಾಘಿಸುತ್ತೇನೆ. ಅಲ್ಲದೆ, ಜನವರಿ 22 ರಂದು ಮುಜರಾಯಿ ಇಲಾಖೆ ಅಧೀನದಲ್ಲಿರುವ ರಾಜ್ಯದ ಎಲ್ಲ ದೇವಸ್ಥಾನಗಳಲ್ಲಿ ರಾಮನ ಪೂಜೆ ನಡೆಸಬೇಕೆಂದು ಸಿದ್ದರಾಮಯ್ಯ ಸರ್ಕಾರ ಒಂದು ಸುತ್ತೋಲೆ ಹೊರಡಿಸಿದೆ. ಇದು ಒಳ್ಳೆಯ ಸಂಗತಿ ಎಂದು ಹೇಳಿದ್ದಾರೆ. ಅಲ್ಲದೆ, ಶುಕ್ರವಾರ ಶಿವಮೊಗ್ಗದಲ್ಲಿ ರಾಜ್ಯ ಸರ್ಕಾರ ತನ್ನ 5ನೇ ಗ್ಯಾರಂಟಿ ಯುವ ನಿಧಿಗೆ ಚಾಲನೆ ನೀಡಿದ್ದನ್ನು ಸಹ ಮಾಜಿ ಪ್ರಧಾನಿ ಮುಕ್ತಕಂಠದಿಂದ ಹೊಗಳಿದ್ದು, ಇದೊಂದು ಉತ್ತಮ ಯೋಜನೆ ಎಂದಿದ್ದಾರೆ.

ಸಲಹೆ ನೀಡಿದ ಮಾಜಿ ಪ್ರ್ರಧಾನಿ: ಸರಕಾರ ನಿರುದ್ಯೋಗಿ ಯುವಕರಿಗೆ ಹಣ ನೀಡಲಿ. ಮೊದಲ ಕಂತನ್ನು ಪಡೆವ ನಿರುದ್ಯೋಗಿ ಪದವೀಧರರು ಅದನ್ನು ಪಡೆದು ಅಯೋಧ್ಯೆ ಪುಣ್ಯಕ್ಷೇತ್ರಕ್ಕೆ ಭೇಟಿ ನೀಡಲು ಬಳಸಲಿ ಎಂದು ಸಲಹೆ ನೀಡಿದ್ದಾರೆ.

ರಾರಾಮಂದಿರ ಉದ್ಘಾಟನೆ ದಿನ ರಾಜ್ಯದ ದೇವಸ್ಥಾನಗಳಲ್ಲಿ ವಿಶೇಷ ಪೂಜೆಗೆ ತಾನು ಹೇಳಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟೀಕರಣ ನೀಡಿದ್ದರು.

Join Whatsapp
Exit mobile version