Home ಟಾಪ್ ಸುದ್ದಿಗಳು ಯಾವುದೇ ವಿನಾಯಿತಿ ನೀಡಲ್ಲ, ಶೇ.10ರಷ್ಟು ಹೆಚ್ಚುವರಿ ಸುಂಕ ವಿಧಿಸುತ್ತೇವೆ: BRICS ರಾಷ್ಟ್ರಗಳಿಗೆ ಅಮೆರಿಕಾ ಎಚ್ಚರಿಕೆ

ಯಾವುದೇ ವಿನಾಯಿತಿ ನೀಡಲ್ಲ, ಶೇ.10ರಷ್ಟು ಹೆಚ್ಚುವರಿ ಸುಂಕ ವಿಧಿಸುತ್ತೇವೆ: BRICS ರಾಷ್ಟ್ರಗಳಿಗೆ ಅಮೆರಿಕಾ ಎಚ್ಚರಿಕೆ

0

ವಾಷಿಂಗ್ಟನ್: ಬ್ರಿಕ್ಸ್‌ನ 11 ರಾಷ್ಟ್ರಗಳ ವಿರುದ್ಧ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವಾಗ್ದಾಳಿ ನಡೆಸಿದ್ದು, ಬ್ರೆಜಿಲ್, ರಷ್ಯಾ, ಭಾರತ ಮತ್ತು ಚೀನಾಗಳನ್ನು ಒಳಗೊಂಡಿರುವ ಬ್ರಿಕ್ಸ್ ಬಣಕ್ಕೆ ಹೆಚ್ಚುವರಿಯಾಗಿ ಶೇಕಡಾ 10 ರಷ್ಟು ಸುಂಕ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಸಾಮಾಜಿಕ ಜಾಲತಾಣ ಟ್ರೂತ್ ನಲ್ಲಿ ಬರೆದಿರುವ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ಬ್ರಿಕ್ಸ್‌ನ ಅಮೇರಿಕನ್ ವಿರೋಧಿ ನೀತಿಗಳೊಂದಿಗೆ ತಮ್ಮನ್ನು ತಾವು ಹೊಂದಿಸಿಕೊಳ್ಳುವ ಯಾವುದೇ ದೇಶಕ್ಕೆ ಹೆಚ್ಚುವರಿಯಾಗಿ ಶೇ.10 ಸುಂಕ ವಿಧಿಸಲಾಗುತ್ತದೆ. ಈ ನೀತಿಗೆ ಯಾವುದೇ ವಿನಾಯಿತಿ ಇರುವುದಿಲ್ಲ” ಎಂದು ಹೇಳಿದ್ದಾರೆ.

ಏತನ್ಮಧ್ಯೆ, ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೆಸರೆತ್ತದೆ ಬ್ರಿಕ್ಸ್ ಬಣವು ಭಾನುವಾರ ಇರಾನ್ ಮೇಲಿನ ದಾಳಿ ಹಾಗೂ ಸುಂಕ ಹೆಚ್ಚಳವನ್ನು ಖಂಡಿಸಿದೆ.

ಶೃಂಗಸಭೆಯ ಮೊದಲು, ಬ್ರಿಕ್ಸ್ ರಾಷ್ಷ ಅಮೆರಿಕಾ ಮೇಲೆ ನೇರವಾಗಿ ದಾಳಿ ಮಾಡದೆ, ಹೆಚ್ಚುತ್ತಿರುವ ಸುಂಕವು ಜಾಗತಿಕ ವ್ಯಾಪಾರದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ ಮತ್ತು ಅದು ವಿಶ್ವ ವ್ಯಾಪಾರ ಸಂಸ್ಥೆ(ಡಬ್ಲ್ಯೂಟಿಒ)ನಿಯಮಗಳಿಗೆ ವಿರುದ್ಧವಾಗಿದೆ ಎಂದು ಹೇಳಿದವು.

ಈ ಬಾರಿಯ ಬ್ರಿಕ್ಸ್ ಶೃಂಗಸಭೆಯನ್ನು ಬ್ರೆಜಿಲ್ ಆಯೋಜಿಸಿದ್ದು, ಇದರಲ್ಲಿ ಹಳೆಯ 5 ದೇಶಗಳಲ್ಲದೆ (ಬ್ರೆಜಿಲ್, ರಷ್ಯಾ, ಭಾರತ, ಚೀನಾ, ದಕ್ಷಿಣ ಆಫ್ರಿಕಾ), ಹೊಸ ಸದಸ್ಯ ರಾಷ್ಟ್ರಗಳಾದ ಈಜಿಪ್ಟ್, ಇಥಿಯೋಪಿಯಾ, ಇರಾನ್, ಯುಎಇ ಮತ್ತು ಇಂಡೋನೇಷ್ಯಾ ಭಾಗವಹಿಸಿದ್ದವು.

2009 ರಲ್ಲಿ ನಡೆದ ತನ್ನ ಮೊದಲ ಶೃಂಗಸಭೆಯಲ್ಲಿ ಬ್ರೆಜಿಲ್, ರಷ್ಯಾ, ಭಾರತ ಮತ್ತು ಚೀನಾದ ನಾಯಕರನ್ನು ಒಟ್ಟುಗೂಡಿಸಿತು. ಬಳಿಕ ಇದಕ್ಕೆ ದಕ್ಷಿಣ ಆಫ್ರಿಕಾ ಸೇರಿಕೊಂಡಿತು.

ಕಳೆದ ವರ್ಷ ಈಜಿಪ್ಟ್, ಇಥಿಯೋಪಿಯಾ, ಇಂಡೋನೇಷ್ಯಾ, ಇರಾನ್, ಸೌದಿ ಅರೇಬಿಯಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಇಂಡೋನೇಷ್ಯಾವನ್ನು ಸದಸ್ಯರನ್ನಾಗಿ ಸೇರಿಸಿತು.

NO COMMENTS

LEAVE A REPLY

Please enter your comment!
Please enter your name here

Exit mobile version