ಇಂಧೋರ್: ನಗರದ ಕಫೆಯಲ್ಲಿ ನಡೆದ ಪ್ರದರ್ಶನದ ಹಾಸ್ಯನಟ ಮುನವರ್ ಫಾರೂಕಿ ಹಿಂದೂ ದೇವತೆಗಳನ್ನು ಅವಮಾನಿಸಿರುವ ಕುರಿತು ಯಾವುದೇ ವೀಡಿಯೊ ಪುರಾವೆ ದೊರೆತಿಲ್ಲ ಎಂದು ಇಂದೋರ್ ಪೊಲೀಸರು ರವಿವಾರ ತಿಳಿಸಿರುವುದಾಗಿ ದಿ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ. ಧಾರ್ಮಿಕ ಭಾವನೆಗಳನ್ನು ನೋಯಿಸಿರುವುದಕ್ಕಾಗಿ ಫಾರೂಕಿಯವರನ್ನು ಶುಕ್ರವಾರದಂದು ಬಂಧಿಸಲಾಗಿತ್ತು.
ದೂರುದಾರ ಸಲ್ಲಿಸಿದ ವೀಡಿಯೊ ಇನ್ನೋರ್ವ ಹಾಸ್ಯ ನಟ ಗಣಪತಿ ದೇವರ ಕುರಿತು ಹಾಸ್ಯ ಮಾಡುವುದನ್ನು ತೋರಿಸುತ್ತದೆ ವಿನ: ಫಾರೂಕಿಯ ಕುರಿತು ಅಲ್ಲ ಎಂದು ತುಕಗಂಜ್ ಪೊಲೀಸ್ ಠಾಣೆಯ ಇನ್ ಸ್ಪೆಕ್ಟರ್ ಕಮಲೇಶ್ ಶರ್ಮಾ ಹೇಳಿದ್ದಾರೆ.
“ಗೃಹ ಸಚಿವ ಅಮಿತ್ ಶಾ ಅಥವಾ ಹಿಂದೂ ದೇವತೆಗಳನ್ನು ಆತ (ಫಾರೂಕಿ) ಅವಮಾನಿಸಿರುವುದಕ್ಕೆ ಪುರಾವೆಯಿಲ್ಲ” ಎಂದು ಶರ್ಮಾ ತಿಳಿಸಿದರು.
ಹಿಂದೂ ರಕ್ಷಕ್ ಸಂಘಟನ್ ಎಂಬ ಹಿಂದುತ್ವ ಗುಂಪಿನ ಮುಖ್ಯಸ್ಥ ಏಕಲವ್ಯ ಸಿಂಗ್ ಗೌರ್ ಎಂಬಾತನ ಸಲ್ಲಿಸಿದ ದೂರಿನ ಆಧಾರದಲ್ಲಿ ಫಾರೂಕಿಯನ್ನು ಬಂಧಿಸಲಾಗಿತ್ತು.