Home ಟಾಪ್ ಸುದ್ದಿಗಳು ಚೀನಾ ಸರಕಾರದೊಂದಿಗೆ ಸಂಘರ್ಷ: ಸಾರ್ವಜನಿಕ ಜೀವನದಿಂದ ಮಾಯವಾದ ಜಾಕ್ ಮಾ

ಚೀನಾ ಸರಕಾರದೊಂದಿಗೆ ಸಂಘರ್ಷ: ಸಾರ್ವಜನಿಕ ಜೀವನದಿಂದ ಮಾಯವಾದ ಜಾಕ್ ಮಾ

ಬೀಜಿಂಗ್/ಹೊಸದಿಲ್ಲಿ: ಚೀನಾ ನಿಯಂತ್ರಕರೊಂದಿಗಿನ ಸಂಘರ್ಷದ ಮಧ್ಯೆ ಟೆಕ್ ಬಿಲಿಯನೇರ್ ಮತ್ತು ಅಲಿಬಾಬ ಸ್ಥಾಪಕ ಜಾಕ್ ಮಾ ಕಳೆದೆರಡು ತಿಂಗಳುಗಳಿಂದ ಸಾರ್ವಜನಿಕ ಜೀವನದಿಂದ ‘ನಾಪತ್ತೆ’ಯಾಗಿದ್ದಾರೆ.

‘ಆಫ್ರಿಕಾಸ್ ಬ್ಯುಸಿನೆಸ್ ಹೀರೋಸ್’ ಎಂಬ ದೂರದರ್ಶನ ಪ್ರದರ್ಶನದ ಫೈನಲ್ ನಲ್ಲಿ ಮಾ ಅವರನ್ನು ತೀರ್ಪುಗಾರ ಸ್ಥಾನದಿಂದ ವಜಾಗೊಳಿಸಲಾಗಿತ್ತು.

“ ಜಡ್ಜಿಂಗ್ ವೆಬ್ ಪೇಜ್ ನಿಂದ ಅವರ ಚಿತ್ರವನ್ನು ತೆಗೆಯಲಾಗಿದೆ ಮತ್ತು ಪ್ರಚಾರ ವೀಡಿಯೋದಿಂದ ಅವರನ್ನು ಸ್ಪಷ್ಟವಾಗಿ ಹೊರಗಿಡಲಾಗಿದೆ” ಎಂದು ವರದಿ ಪ್ರತಿಪಾದಿಸಿದೆ.

“ಚೀನಾದ ನಿಯಂತ್ರಕರು ಮತ್ತು ಅದರ ಪ್ರಭುತ್ವ ಮಾಲೀಕತ್ವದ ಬ್ಯಾಂಕ್ ಗಳನ್ನು ಟೀಕಿಸುತ್ತಾ ಮಾ ನಡೆಸಿದ ಭಾಷಣದ ನಂತರ ನವೆಂಬರ್ ನಲ್ಲಿ ಫೈನಲ್ ನಡೆದಿತ್ತು” ಎಂದು ವರದಿ ಹೇಳಿದೆ.

“ಬೀಜಿಂಗ್ ನಲ್ಲಿ ಅಧಿಕಾರಿಗಳು ಮಾರನ್ನು ಬೆದರಿಸಿದ್ದರು ಮತ್ತು ಅವರ ಕಂಪೆನಿಗೆ ನೀಡಲಾಗಿದ್ದ 37 ಡಾಲರ್ ಬಿಲಿಯನ್ ಸಾರ್ವಜನಿಕ ಯೋಜನೆಯನ್ನು ಅಮಾನತುಗೊಳಿಸಲಾಗಿದೆ. ಅಂದಿನಿಂದ ಅವರು ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ” ಎಂದು ವರದಿ ಹೇಳಿದೆ.

ಕಳೆದ ತಿಂಗಳು ಚೀನಾದ ಉನ್ನತ ಮಾರುಕಟ್ಟೆ ನಿಯಂತ್ರಕವು ಇ ಕಾಮರ್ಸ್ ದೈತ್ಯ ಅಲಿಬಾಬ ವಿರುದ್ಧ ಸ್ಪರ್ಧಾ ವಿರೋಧಿ ಆಚರಣೆಯ ಆರೋಪ ಕುರಿತು ತನಿಖೆಯನ್ನು ಆರಂಭಿಸಿತ್ತು.

Join Whatsapp
Exit mobile version