Home ಟಾಪ್ ಸುದ್ದಿಗಳು ಪಂಚೆ ಧರಿಸಿದ್ದ ರೈತರಿಗೆ ಜಿಟಿ ಮಾಲ್‌‌ನಲ್ಲಿ ನೋ ಎಂಟ್ರಿ: ವ್ಯಾಪಕ ಆಕ್ರೋಶ

ಪಂಚೆ ಧರಿಸಿದ್ದ ರೈತರಿಗೆ ಜಿಟಿ ಮಾಲ್‌‌ನಲ್ಲಿ ನೋ ಎಂಟ್ರಿ: ವ್ಯಾಪಕ ಆಕ್ರೋಶ

ಬೆಂಗಳೂರು: ಪಂಚೆ ಹಾಕೊಂಡು ಬಂದಿದ್ದ ಕಾರಣಕ್ಕಾಗಿ ರೈತ ಓರ್ವರನ್ನು ಜಿಟಿ ಮಾಲ್ ಸಿಬ್ಬಂದಿ ಒಳಗೆ ಬಿಡದ ಘಟನೆ ಬೆಂಗಳೂರಿನ ಮಾಗಡಿ ರಸ್ತೆಯ ಜಿಟಿ ಮಾಲ್‌ನಲ್ಲಿ ನಡೆದಿದೆ.

ಹಾವೇರಿಯ ನಾಗರಾಜ್ ತಮ್ಮ ತಂದೆ, ತಾಯಿಯನ್ನು ಜಿಟಿ ಮಾಲ್‌ಗೆ ಮಂಗಳವಾರ ಸಂಜೆ ಸಿನೆಮಾ ತೋರಿಸಲು ಕರೆದುಕೊಂಡು ಹೋಗ್ತಾ ಇದ್ದರು. ಮಾಲ್ ಪ್ರವೇಶ ದ್ವಾರದಲ್ಲಿ ಸಿಬ್ಬಂದಿ ಪಂಚೆ ಹಾಕಿದ್ದಾರೆ ಅನ್ನುವ ಕಾರಣಕ್ಕೆ ಅವರನ್ನು ಮಾಲ್ ಒಳಗೆ ಪ್ರವೇಶ ಮಾಡಲು ನಿರಾಕರಿಸಿದ್ದಾರೆ. ನಾಗರಾಜ್ ತಂದೆ ಹಾವೇರಿ ಜಿಲ್ಲೆಯ ಅರೇಮಲ್ಲಾಪುರ ಎಂಬ ಗ್ರಾಮದ ರೈತರಾಗಿದ್ದಾರೆ. ಅವರನ್ನು ಅರ್ಧ ಗಂಟೆಗೂ ಹೆಚ್ಚು ಕಾಲ ಮಾಲ್ ಮುಂದೆ ಕೂರಿಸಿದ್ದಾರೆ. ನಾಗರಾಜ್ ಒಳಗೆ ಬಿಡಿ ಎಂದು ಎಷ್ಟು ಬಾರಿ ಕೇಳಿದರೂ ಪಂಚೆ ಹಾಕೊಂಡಿದ್ದಾರೆ ಹಾಗಾಗಿ ಬಿಡುವುದಿಲ್ಲ, ಮಾಲ್‌ನಲ್ಲಿ ಪಂಚೆ ಹಾಕಿದವರನ್ನು ಬಿಡುವುದಿಲ್ಲ. ನಮ್ಮ ಮಾಲ್‌ನಲ್ಲಿ ಈ ರೀತಿ ರೂಲ್ಸ್ ಇದೆ ಎಂದು ಸಿಬ್ಬಂದಿ ಹೇಳಿದ್ದಾರೆ.

ಈ ಘಟನೆ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.

Join Whatsapp
Exit mobile version