Home ಟಾಪ್ ಸುದ್ದಿಗಳು ಸೇನಾ ನೆಲೆಯ ಮೇಲೆ ದಾಳಿ: ಎಂಟು ಪಾಕಿಸ್ತಾನಿ ಸೈನಿಕರು ಮೃತ

ಸೇನಾ ನೆಲೆಯ ಮೇಲೆ ದಾಳಿ: ಎಂಟು ಪಾಕಿಸ್ತಾನಿ ಸೈನಿಕರು ಮೃತ

ಪಾಕಿಸ್ತಾನ: ದಾಳಿಕೋರರು ಸ್ಫೋಟಕಗಳನ್ನು ತುಂಬಿದ್ದ ವಾಹನವನ್ನು ಪಾಕ್ ಸೇನಾ ನೆಲೆಯ ಗೋಡೆಗೆ ಡಿಕ್ಕಿ ಹೊಡೆಸಲಾಗಿದ್ದು, ಇದರ ಪರಿಣಾಮ ಸುಮಾರು ಎಂಟು ಮಂದಿ ಪಾಕಿಸ್ತಾನಿ ಸೈನಿಕರು ಸಾವನ್ನಪ್ಪಿದ್ದಾರೆ.

ಈ ದಾಳಿಯಲ್ಲಿ ನಡೆಸಿದ ಎಲ್ಲರನ್ನೂ ಸೈನಿಕರು ಕೊಂದಿದ್ದಾರೆ ಎಂದು ಮಿಲಿಟರಿ ಹೇಳಿದೆ.

ದಾಳಿಕೋರರು ಸೇನಾ ನೆಲೆಯನ್ನು ಪ್ರವೇಶಿಸಲು ಸಾಧ್ಯವಾಗದೆ ಇದ್ದಾಗ ಸ್ಫೋಟಕ ತುಂಬಿದ ವಾಹನವನ್ನು ಕಂಟೋನ್ಮೆಂಟ್‌ನ ಗೋಡಗೆ ಡಿಕ್ಕಿ ಹೊಡೆಸಿದ್ದಾರೆ. ಇದರ ಪರಿಣಾಮ ಗೋಡೆಯ ಒಂದು ಭಾಗವು ಕುಸಿದು ಪಕ್ಕದಲ್ಲಿದ್ದ ವಸ್ತುಗಳಿಗೆ ಹಾನಿಯಾಗಿದೆ. ಘಟನೆಯಲ್ಲಿ ಎಂಟು ಸೈನಿಕರು ಸಾವನ್ನಪ್ಪಿದ್ದಾರೆ. ಅಫ್ಘಾನಿಸ್ತಾನದಿಂದ ಕಾರ್ಯಾಚರಣೆ ನಡೆಸುತ್ತಿರುವ ಹಫೀಜ್ ಗುಲ್ ಬಹದ್ದೂರ್ ಗುಂಪು ದಾಳಿಯಲ್ಲಿ ಭಾಗಿಯಾಗಿದೆ ಎಂದು ಪಾಕ್ ಸೇನೆ ಆರೋಪಿಸಿದೆ.

Join Whatsapp
Exit mobile version