ಯಾವುದೇ ಭ್ರಷ್ಟಾಚಾರ ಎಸಗಿಲ್ಲ: ಬ್ರಿಟನ್‌ ಸಂಸದೆ ತುಲಿಪ್‌ ರಿಝ್ವಾನಾ ಸಿದ್ದಿಕ್‌

- Advertisement -

ಲಂಡನ್‌: ‘ನಾನು ಯಾವುದೇ ತಪ್ಪು ಮಾಡಿಲ್ಲ’ ಎಂದು ಬ್ರಿಟನ್‌ ನ ಲೇಬರ್‌ ಪ‍ಕ್ಷದ ಸಂಸದೆ ತುಲಿಪ್‌ ರಿಝ್ವಾನಾ ಸಿದ್ದಿಕ್‌ ತಿಳಿಸಿದ್ದಾರೆ.

- Advertisement -

ರಾಜಕೀಯ ಅಧಿಕಾರ ದುರುಪಯೋಗಪಡಿಸಿಕೊಂಡು, ಅಕ್ರಮವಾಗಿ ಆಸ್ತಿ ಸಂಪಾದಿಸಿದ ಆರೋಪದ ಮೇಲೆ ಭ್ರಷ್ಟಾಚಾರ ನಿಗ್ರಹ ಆಯೋಗವು(ಎಸಿಸಿ) ಸಲ್ಲಿಸಿದ ದೋಷಾರೋಪ ಪಟ್ಟಿ ಆಧರಿಸಿ, ಬಾಂಗ್ಲಾದೇಶದ ಪದಚ್ಯುತ ಪ್ರಧಾನಿ ಶೇಖ್ ಹಸೀನಾ, ಆಕೆಯ ಸಹೋದರಿ ಶೇಖ್ ರೆಹಾನಾ, ಸಂಬಂಧಿ, ಬ್ರಿಟನ್‌ ನ ಸಂಸದೆ ತುಲಿಪ್‌ ರಿಝ್ವಾನಾ ಸಿದ್ದಿಕ್‌ ಹಾಗೂ 50 ಮಂದಿಯ ವಿರುದ್ಧ ಬಾಂಗ್ಲಾದೇಶ ನ್ಯಾಯಾಲಯವು ಭಾನುವಾರ ಬಂಧನದ ವಾರಂಟ್‌ ಹೊರಡಿಸಿತ್ತು. ಇದರ ಬೆನ್ನಲ್ಲೇ, ಈ ಸ್ಪಷ್ಟನೆ ನೀಡಿದ್ದಾರೆ.

ಕುಟುಂಬದೊಂದಿಗಿನ ಸಂಬಂಧದಿಂದ, ಪ್ರಧಾನಿ ಕಿಯರ್‌ ಸ್ಟಾರ್ಮರ್‌ ಸರ್ಕಾರದಲ್ಲಿ ಕೆಲಸ ಮಾಡಲು ಕಷ್ಟವಾಗುತ್ತಿದೆ ಎಂದು ತಿಳಿಸಿ ಬ್ರಿಟನ್‌ ನ ಹಣಕಾಸು ಇಲಾಖಾ ಸಚಿವ ಸ್ಥಾನಕ್ಕೆ ತುಲಿಪ್‌ ಸಿದ್ದಿಕ್‌ ಅವರು ಕಳೆದ ಜನವರಿ ತಿಂಗಳಿನಲ್ಲೇ ರಾಜೀನಾಮೆ ನೀಡಿದ್ದರು.

- Advertisement -

‘ಈಗ ಅವರ ವಿರುದ್ಧ ಕೇಳಿಬಂದಿರುವ ಭ್ರಷ್ಟಾಚಾರದ ಆರೋಪ ಸಂಪೂರ್ಣ ಆಧಾರರಹಿತವಾಗಿದೆ’ ಎಂದು ಅವರ ವಕ್ತಾರರು ತಿಳಿಸಿದ್ದಾರೆ.

- Advertisement -


Must Read

Related Articles