Home ಕ್ರೀಡೆ ಟೀಮ್ ಇಂಡಿಯಾ ಆಟಗಾರರಿಗೆ ನೋ ಬೀಫ್.. ನೋ ಪೋರ್ಕ್ ! ONLY ಹಲಾಲ್

ಟೀಮ್ ಇಂಡಿಯಾ ಆಟಗಾರರಿಗೆ ನೋ ಬೀಫ್.. ನೋ ಪೋರ್ಕ್ ! ONLY ಹಲಾಲ್

ನವದೆಹಲಿ: ನ್ಯೂಜಿಲೆಂಡ್ ವಿರುದ್ಧದ T-20 ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿ ಟೆಸ್ಟ್ ಸರಣಿಗೆ ಸಜ್ಜಾಗುತ್ತಿರುವ ಟೀಮ್ ಇಂಡಿಯಾದ ಆಟಗಾರರ ಆಹಾರ ಮೆನುವಿನಿಂದ ಹಂದಿ ಮತ್ತು ಗೋಮಾಂಸವನ್ನು ಹೊರಗಿಡಲಾಗಿದೆ. ಅಲ್ಲದೆ ಮಾಂಸಾಹಾರಿ ಖಾದ್ಯಗಳಲ್ಲಿ ಹಲಾಲ್ ಮಾಂಸವನ್ನು ಮಾತ್ರ ಬಳಸಲಾಗುತ್ತದೆ ಎಂದು ತಿಳಿಸಲಾಗಿದೆ ಎಂದು NDTV, SPORTS TAK ಮಾಧ್ಯಮಗಳು ವರದಿ ಮಾಡಿವೆ.


ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯ ಗುರುವಾರದಿಂದ ಕಾನ್ಪುರದಲ್ಲಿ ಆರಂಭವಾಗಲಿದೆ. ಈಗಾಗಲೇ ಎರಡೂ ತಂಡಗಳು ಕಾನ್ಪುರ ತಲುಪಿದ್ದು, ಬಯೋಬಬಲ್ ವ್ಯವಸ್ಥೆಯಡಿ ಲ್ಯಾಂಡ್’ ಮಾರ್ಕ್ ಟವರ್’ನಲ್ಲಿ ಉಳಿದುಕೊಂಡಿದ್ದಾರೆ. ಅಭ್ಯಾಸದಲ್ಲಿ ತೊಡಗಿರುವ ಭಾರತೀಯ ಆಟಗಾರರಿಗಾಗಿ ಆಹಾರದ ಮೆನುವನ್ನು ಬಿಡುಗಡೆ ಮಾಡಲಾಗಿದೆ. ಕ್ರೀಡಾಂಗಣದಲ್ಲಿ ಮಿನಿ ಉಪಹಾರ, ಮಧ್ಯಾಹ್ನದ ಊಟ, ಸಂಜೆ ಟೀ ಮತ್ತು ಲಘು ತಿಂಡಿ, ಹಾಗೂ ರಾತ್ರಿಯ ಊಟ ಮೆನುವಿನಲ್ಲಿದೆ. ಈ ಆಹಾರದ ಮೆನುವಿನಿಂದ ಹಂದಿ ಮತ್ತು ಗೋಮಾಂಸವನ್ನು ಹೊರಗಿಡಲಾಗಿದೆ. ಅಲ್ಲದೆ ಮಾಂಸಾಹಾರಿ ಖಾದ್ಯಗಳಲ್ಲಿ ಹಲಾಲ್ ಮಾಂಸವನ್ನು ಮಾತ್ರ ಬಳಸಲಾಗುತ್ತದೆ ಎಂದು ತಿಳಿಸಲಾಗಿದೆ.


ಟೀಮ್ ಇಂಡಿಯಾದ ಮೆನುವಿನ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ. ಮುಸ್ಲಿಮರಿಗೆ ಹಲಾಲ್ ಮಾಂಸ ಕಡ್ಡಾಯವಾಗಿದೆ. ಆದರೆ ತಂಡದಲ್ಲಿರುವ ಇತರ ಧರ್ಮದ ಆಟಗಾರರಿಗೂ ಹಲಾಲ್ ಮಾಂಸವನ್ನು ಮಾತ್ರ ಏಕೆ ನೀಡಲಾಗುತ್ತದೆ ಎಂದು ಕೆಲವರು ಪ್ರಶ್ನಿಸಿದ್ದಾರೆ.


ಏನಿದು ಹಲಾಲ್ ಮಾಂಸ?
ಇಸ್ಲಾಂ ಧರ್ಮದ ಮಾಂಸಾಹಾರ ಕ್ರಮವನ್ನು ಸಾಮಾನ್ಯವಾಗಿ ಹಲಾಲ್ ಹೆಸರಿನಲ್ಲಿ ಗುರುತಿಸಲಾಗುತ್ತದೆ. ಹಲಾಲ್ ಎಂಬುದು ಅರಬಿ ಶಬ್ಧವಾಗಿದ್ದು, ಪರಿಶುದ್ಧತೆ ಎಂಬ ಅರ್ಥವನ್ನು ಹೊಂದಿದೆ. ಇಸ್ಲಾಂ ಧರ್ಮವನ್ನು ಅನುಸರಿಸುವವರಿಗೆ ಎಲ್ಲಾ ಆಹಾರಗಳನ್ನು ಸೇವಿಸಲು ಅವಕಾಶವಿಲ್ಲ. ಹಂದಿ, ನಾಯಿ, ಹೆಚ್ಚಿನ ಕಾಡುಪ್ರಾಣಿಗಳ ಮಾಂಸಹಾರ ಸೇವನೆ ಇಸ್ಲಾಮ್ ನಲ್ಲಿ ನಿಶಿದ್ಧ.
ಮತ್ತೊಂದೆಡೆ ಸೇವಿಸಲು ಅನುಮತಿ ಇರುವ ಮಾಂಸವನ್ನು ಹಲಾಲ್ ಮಾಡಿದ ಬಳಿಕವಷ್ಟೇ ಸೇವಿಸಬೇಕು. ಹೀಗಾಗಿ ಹಲಾಲ್ ಮಾಡುವುದು ಎಂದರೆ ಪ್ರಾಣಿಯನ್ನು ವಧಿಸುವ ವಿಧಾನ. ಮುಸ್ಲಿಮರು ತಿನ್ನುವ ಮಾಂಸಾಹಾರವನ್ನು ಹಲಾಲ್ ಮಾಡುವುದು ಕಡ್ಡಾಯ.

ಇದಕ್ಕಾಗಿ ಪ್ರಾಣಿಯನ್ನು ಕೊಲ್ಲಲು ನಿರ್ದಿಷ್ಟ ಕ್ರಮಗಳಿವೆ. ಅದರಂತೆ ಒಂದು ಪ್ರಾಣಿಯನ್ನು ವಧಿಸುವ ಮುನ್ನ ಅದಕ್ಕೆ ಕುಡಿಯಲು ನೀರು ನೀಡಿ, ಬಳಿಕ ಅದರ ಕತ್ತಿನ ನರವನ್ನು ಕತ್ತರಿಸಿ ದೇಹದಿಂದ ರಕ್ತವೆಲ್ಲವೂ ಹೊರಬರಬೇಕು ಎಂಬ ನಿಯಮವಿದೆ. ಹೀಗೆ ವಧಿಸುವಾಗ ಮುಸ್ಲಿಮರ ಪವಿತ್ರ ಸ್ಥಳ ಮಕ್ಕಾದತ್ತ ಮುಖ ಮಾಡುತ್ತಾರೆ. ವಧಿಸುವ ಸಮಯದಲ್ಲಿ ಅಲ್ಲಾಹುವಿನ ನಾಮೋಚ್ಛಾರ ಮಾಡುತ್ತಾ ವಧಿಸಬೇಕು ಎಂಬ ನಿಯಮವಿದೆ. ಇದರ ಹೊರತಾಗಿ ಮೊದಲೇ ಸತ್ತ ಪ್ರಾಣಿಯ ಮಾಂಸ, ಅನಾರೋಗ್ಯದಿಂದ ಬಳಲುತ್ತಿರುವ ಪ್ರಾಣಿಯ ಮಾಂಸ ಹಾಗೂ ಹಲಾಲ್ ಮಾಡದ ಮಾಂಸ ಸೇವಿಸುವುದು ಮುಸ್ಲಿಮರಿಗೆ ನಿಷಿದ್ಧ. ಹೀಗೆ ಮಾಂಸಾಹಾರವನ್ನು ನೀಡುವ ಹೊಟೇಲ್ ಅಥವಾ ರೆಸ್ಟೊರೆಂಟ್ ಗಳಲ್ಲಿ ಮಾಂಸವನ್ನು ಹಲಾಲ್ ಮಾಡಲಾಗಿದೆ ಎಂದು ತಿಳಿಸಲು ಹಲಾಲ್ ಕಟ್ ಅಥವಾ ಹಲಾಲ್ ಎಂದು ಬೋರ್ಡ್ ಹಾಕಲಾಗಿರುತ್ತದೆ.

Join Whatsapp
Exit mobile version