Home ಟಾಪ್ ಸುದ್ದಿಗಳು ಸ್ವಾತಂತ್ರ್ಯೋತ್ಸವ ದಿನದಂದು ಮರಾಠಿ ಭಾಷಿಕ ಪುಂಡರ ಕಿರಿಕ್, ತ್ರಿವರ್ಣ ಧ್ವಜದ ಪಕ್ಕದಲ್ಲೇ ಭಗವಾ ಧ್ವಜ ಹಾರಿಸಲು...

ಸ್ವಾತಂತ್ರ್ಯೋತ್ಸವ ದಿನದಂದು ಮರಾಠಿ ಭಾಷಿಕ ಪುಂಡರ ಕಿರಿಕ್, ತ್ರಿವರ್ಣ ಧ್ವಜದ ಪಕ್ಕದಲ್ಲೇ ಭಗವಾ ಧ್ವಜ ಹಾರಿಸಲು ಯತ್ನ

ಬೆಳಗಾವಿ: ದೇಶಾದ್ಯಂತ ಇಂದು (ಆಗಸ್ಟ್ 15) 77ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಗುತ್ತಿದೆ. ರಾಷ್ಟ್ರದ ವಿವಿಧ ರಾಜ್ಯಗಳಲ್ಲಿ, ಜಿಲ್ಲಾಕೇಂದ್ರಗಳಲ್ಲಿ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ ಮನೆ ಮಾಡಿದೆ. ಶಾಲೆ, ಕಾಲೇಜು ಮತ್ತು ಸರ್ಕಾರಿ ಕಚೇರಿಗಳಲ್ಲಿ ಧ್ವಜಾರೋಹಣ ನೆರವೇರಿದೆ. ಆದ್ರೆ, ಚಿಕ್ಕೋಡಿಯಲ್ಲಿ ಸ್ವಾತಂತ್ರ್ಯೋತ್ಸವ ಸಂಭ್ರಮ ದಿನದಂದು ಮರಾಠಿ ಭಾಷಿಕ ಪುಂಡರು ಕಿರಿಕ್ ಮಾಡಿದ್ದಾರೆ.

ಬೆಳಗಾವಿ ಜಿಲ್ಲೆ ನಿಪ್ಪಾಣಿ ನಗರಸಭೆ ಮೇಲೆ ಭಗವಾ ಧ್ವಜ ಹಾರಿಸಲು ಯತ್ನಿಸಿದ್ದಾರೆ. ಮಾಜಿ ಸಚಿವೆ ಶಾಸಕಿ ಶಶಿಕಲಾ ಜೊಲ್ಲೆ ಹಾಗೂ ಸ್ಥಳೀಯ ಅಧಿಕಾರಿಗಳಿಂದ ಧ್ವಜಾರೋಹಣದ ಬಳಿಕ ಈ ಘಟನೆ ನಡೆದಿದೆ.

ಬೆಳಗಾವಿ ಜಿಲ್ಲೆ ನಿಪ್ಪಾಣಿ ನಗರಸಭೆ ಮೇಲೆ ತ್ರಿವರ್ಣ ಧ್ವಜ ಹಾರಿಸಿದ ಬಳಿಕ ಅದರ ಪಕ್ಕದಲ್ಲೇ ಮರಾಠಿ ಭಾಷಿಕ ನಿಪ್ಪಾಣಿ ನಗರಸಭಾ ಸದಸ್ಯರಾದ ವಿನಾಯಕ ವಾಡೆ ಹಾಗೂ ಸಂಜಯ ಸಾಂಗಾವಕರ್ ಅವರು ಭಗವಾ ಧ್ವಜ ಹಾರಿಸಲು ಮುಂದಾಗಿದ್ದಾರೆ. ಕೂಡಲೇ ಪೊಲೀಸರು ಅದನ್ನು ತಡೆದಿದ್ದು, ಧ್ವಜ ಹಾರಿಸಲು ಬಂದವರನ್ನ ತಡೆದು ತರಾಟೆಗೆ ತೆಗೆದುಕೊಂಡರು. ಈ ಇಬ್ಬರು ಎನ್.ಸಿ.ಪಿ. ಬೆಂಬಲಿತ ನಿಪ್ಪಾಣಿ ನಗರಸಭೆ ಸದಸ್ಯರು.

Join Whatsapp
Exit mobile version