Home ಟಾಪ್ ಸುದ್ದಿಗಳು ಓಮಿಕ್ರಾನ್ ಭೀತಿ : ನಾಳೆಯಿಂದ ಉತ್ತರ ಪ್ರದೇಶದಲ್ಲಿ ನೈಟ್ ಕರ್ಫ್ಯೂ ಜಾರಿ

ಓಮಿಕ್ರಾನ್ ಭೀತಿ : ನಾಳೆಯಿಂದ ಉತ್ತರ ಪ್ರದೇಶದಲ್ಲಿ ನೈಟ್ ಕರ್ಫ್ಯೂ ಜಾರಿ

ಲಕ್ನೋ: ಓಮಿಕ್ರಾನ್ ಹರಡುತ್ತಿರುವ ಭೀತಿಯ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದಾದ್ಯಂತ ನೈಟ್ ಕರ್ಫ್ಯೂ ಜಾರಿಗೊಳಿಸಲು ಸರ್ಕಾರ ಅದೇಶ ನೀಡಿದೆ. ಈ ಆದೇಶದನ್ವಯ ರಾತ್ರಿ 11 ರಿಂದ ಬೆಳಿಗ್ಗೆ 5 ರವರೆಗೆ ಸಾರ್ವಜನಿಕ ಸಂಚಾರವನ್ನು ನಿರ್ಬಂಧಿಸಲಾಗಿದೆ.

ಮಾತ್ರವಲ್ಲ ಮದುವೆ ಮತ್ತು ಸಾಮಾಜಿಕ ಕಾರ್ಯಗಳಿಗೆ ಕೋವಿಡ್ ಮಾರ್ಗಸೂಚಿಗಳೊಂದಿಗೆ ಕೇವಲ 200 ಜನರಿಗೆ ಮಾತ್ರ ಅನುಮತಿ ನೀಡಲಾಗಿದೆ.

ಮಧ್ಯಪ್ರದೇಶದ ನಂತರ ಉತ್ತರ ಪ್ರದೇಶ ನೈಟ್ ಕರ್ಫ್ಯೂ ಜಾರಿಗೊಳಿಸಿದ ಎರಡನೇ ರಾಜ್ಯವಾಗಿದೆ.

Join Whatsapp
Exit mobile version