Home ಟಾಪ್ ಸುದ್ದಿಗಳು ಉತ್ತರ ಪ್ರದೇಶದಲ್ಲಿ ಚುನಾವಣಾ ಪ್ರಚಾರ ಜಾಥಾ, ಸಮಾವೇಶ ನಡೆಸದಂತೆ ಅಲಹಾಬಾದ್ ಹೈಕೋರ್ಟ್ ಸಲಹೆ

ಉತ್ತರ ಪ್ರದೇಶದಲ್ಲಿ ಚುನಾವಣಾ ಪ್ರಚಾರ ಜಾಥಾ, ಸಮಾವೇಶ ನಡೆಸದಂತೆ ಅಲಹಾಬಾದ್ ಹೈಕೋರ್ಟ್ ಸಲಹೆ

ಸಾಂದರ್ಭಿಕ ಚಿತ್ರ

ಲಕ್ನೋ: ಎಲ್ಲ ಕಡೆ ಓಮಿಕ್ರಾನ್ ಕೊರೋನಾ ಸೋಂಕು ಹರಡುತ್ತಿದ್ದು, ಇಂಥ ಸಮಯದಲ್ಲಿ ರಾಜಕೀಯ ಜಾಥಾ, ಪ್ರಚಾರ ಮೆರವಣಿಗೆಗಳನ್ನು ನಿಲ್ಲಿಸುವಂತೆ ಅಲಹಾಬಾದ್ ಹೈಕೋರ್ಟ್ , ಚುನಾವಣಾ ಆಯೋಗಕ್ಕೆ ಸೂಚನೆ ನೀಡಿದೆ.


ಓಮಿಕ್ರಾನ್ ಬಗ್ಗೆ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯನ್ನು ವಿಚಾರಣೆ ಮಾಡಿದ ಜಸ್ಟಿಸ್ ಯಾದವ್ ಅವರು, ಚೀನಾ ಮೊದಲಾದ ಕಡೆ ಓಮಿಕ್ರಾನ್ ವಿರುದ್ಧ ಲಾಕ್ ಡೌನ್ ಘೋಷಿಸಲಾಗಿದೆ. ಇಲ್ಲಿ ಮಿತಿ ಮೀರಿ ರಾಜಕೀಯ ಪ್ರಚಾರ ನಡೆದಿದೆ. ಇಂಥ ಪ್ರಚಾರ ಇಲ್ಲದೆಯೇ ಚುನಾವಣೆ ನಡೆಸಲು ಪ್ರಯತ್ನಿಸಿ ಎಂದು ನ್ಯಾಯಾಧೀಶರು ಹೇಳಿದರು.


ಇನ್ನು ಮೂರು ತಿಂಗಳಲ್ಲಿ ಉತ್ತರ ಪ್ರದೇಶ ಸಹಿತ ಐದು ರಾಜ್ಯಗಳಲ್ಲಿ ಚುನಾವಣೆ ನಡೆಯಲಿದೆ. ಕೆಲವು ವರ್ಗಗಳು ಈ ರಾಜ್ಯಗಳಲ್ಲಿ ಸದ್ಯಕ್ಕೆ ರಾಷ್ಟ್ರಪತಿ ಆಡಳಿತ ಹೇರುವುದು ಒಳಿತು ಎಂದು ಹೇಳಿದ್ದಾರೆ.

Join Whatsapp
Exit mobile version