Home ಟಾಪ್ ಸುದ್ದಿಗಳು SDPI ನಾಯಕ ರಿಯಾಝ್ ಫರಂಗಿಪೇಟೆ ನಿವಾಸಕ್ಕೆ NIA ದಾಳಿ: ಪಕ್ಷದ ಕಾರ್ಯಕರ್ತರಿಂದ ಪ್ರತಿಭಟನೆ

SDPI ನಾಯಕ ರಿಯಾಝ್ ಫರಂಗಿಪೇಟೆ ನಿವಾಸಕ್ಕೆ NIA ದಾಳಿ: ಪಕ್ಷದ ಕಾರ್ಯಕರ್ತರಿಂದ ಪ್ರತಿಭಟನೆ

ಮಂಗಳೂರು: ಪೊಲೀಸ್ ತನಿಖಾ ವರದಿ ಹೊರಬಿದ್ದ ಮೇಲೂ ಪ್ರವೀಣ್ ನೆಟ್ಟಾರು ಪ್ರಕರಣವನ್ನು ರಾಜ್ಯ ಸರಕಾರ NIA ಗೆ ವಹಿಸಿದೆ‌. ದ.ಕ ಜಿಲ್ಲೆಯಲ್ಲಿ NIA ದಾಳಿ ಮುಂದುವರಿದಿದ್ದು SDPI ನಾಯಕ ರಿಯಾಝ್ ಫರಂಗಿಪೇಟೆ ಮನೆಗೆ ಗುರುವಾರ ಬೆಳಗ್ಗೆ NIA ದಾಳಿ ಮಾಡಿದೆ.

ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣಕ್ಕೆ ಸಂಬಂದಿಸಿದಂತೆ NIA ಸಪ್ಟೆಂಬರ್ 7 ರಂದು ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿ 30 ಕಡೆ ದಾಳಿ ನಡೆಸಿತ್ತು. ಇದರ ಮುಂದುವರಿದ ಭಾಗವಾಗಿ ಇಂದು ಬೆಳಿಗ್ಗೆ SDPI ರಾಷ್ಟ್ರೀಯ ನಾಯಕ ರಿಯಾಝ್ ಫರಂಗಿಪೇಟೆ ಮನೆಗೆ NIA ದಾಳಿ ನಡೆಸಿದ್ದು, ಇದನ್ನು ವಿರೋಧಿಸಿ ಮನೆಮುಂದೆ SDPI ಕಾರ್ಯಕರ್ತರು ಪ್ರತಿಭಟಿಸಿದ್ದಾರೆ.

ಮುಸ್ಲಿಂ ಸಮುದಾಯವನ್ನು ಭಯಬೀತಿಗೊಳಿಸಲು ಮತ್ತು ಬಿಜೆಪಿ ಕಾರ್ಯಕರ್ತರ ಆಕ್ರೋಶ ತಣ್ಣಗಾಗಿಸಲು ರಾಜ್ಯ ಸರಕಾರ NIA ಛೂಬಿಟ್ಟಿದ್ದು ರಾಷ್ಟ್ರೀಯ ತನಿಖಾ ಧಳವು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅವಾಂತರ ಸೃಷ್ಟಿಸುತ್ತಿದೆ ಎಂದು ಪಾಪ್ಯುಲರ್ ಫ್ರಂಟ್ ಆರೋಪಿಸಿದೆ.

Join Whatsapp
Exit mobile version