Home ಟಾಪ್ ಸುದ್ದಿಗಳು ನೀಟ್ ಫಲಿತಾಂಶ ಪ್ರಕಟ: ರಾಜಸ್ಥಾನದ ತನಿಷ್ಕಾ ಏರ್ 1, ಕರ್ನಾಟಕದ ಹೃಷಿಕೇಶ್ ಗೆ 3ನೇ ಸ್ಥಾನ

ನೀಟ್ ಫಲಿತಾಂಶ ಪ್ರಕಟ: ರಾಜಸ್ಥಾನದ ತನಿಷ್ಕಾ ಏರ್ 1, ಕರ್ನಾಟಕದ ಹೃಷಿಕೇಶ್ ಗೆ 3ನೇ ಸ್ಥಾನ

ನವದೆಹಲಿ: ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು ಬುಧವಾರ ನೀಟ್ 2022 ಫಲಿತಾಂಶವನ್ನು ಪ್ರಕಟಿಸಿದೆ. ವೈದ್ಯಕೀಯ ಪ್ರವೇಶ ಪರೀಕ್ಷೆಯಲ್ಲಿ 9.93 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಉತ್ತೀರ್ಣರಾಗಿದ್ದು ರಾಜಸ್ಥಾನದ ತನಿಷ್ಕಾ ಮೊದಲ ರ್ಯಾಂಕ್ ಪಡೆದಿದ್ದಾರೆ.

ದೆಹಲಿಯ ವತ್ಸ ಆಶಿಶ್ ಬಾತ್ರಾ ಮತ್ತು ಕರ್ನಾಟಕದ ಹೃಷಿಕೇಶ್ ನಾಗಭೂಷಣ್ ಗಂಗುಲೆ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಪಡೆದರು.

17.64 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು ಅದರಲ್ಲಿ 9.93 ಲಕ್ಷಕ್ಕೂ ಹೆ‍‍ಚ್ಚು ಮಂದಿ ಉತ್ತೀರ್ಣರಾದರು. ಇದೇ ಮೊದಲ ಬಾರಿಗೆ ಅಬುಧಾಬಿ, ಬ್ಯಾಂಕಾಕ್, ಕೊಲಂಬೊ, ದೋಹಾ, ಕಠ್ಮಂಡು, ಕೌಲಾಲಂಪುರ, ಲಾಗೋಸ್, ಮನಾಮಾ, ಮಸ್ಕತ್, ರಿಯಾದ್, ಶಾರ್ಜಾ, ಸಿಂಗಾಪುರ್, ದುಬೈ ಮತ್ತು ಕುವೈತ್ ಸಿಟಿಯಲ್ಲಿ ಪರೀಕ್ಷೆ ನಡೆಸಲಾಗಿದೆ.

Join Whatsapp
Exit mobile version