Home ಟಾಪ್ ಸುದ್ದಿಗಳು ಹುರಿಯತ್ ಕಾನ್ಫರೆನ್ಸ್ ಕಚೇರಿಯನ್ನು ಮುಟ್ಟುಗೋಲು ಹಾಕಿದ ಎನ್ಐಎ

ಹುರಿಯತ್ ಕಾನ್ಫರೆನ್ಸ್ ಕಚೇರಿಯನ್ನು ಮುಟ್ಟುಗೋಲು ಹಾಕಿದ ಎನ್ಐಎ

ಹೊಸದಿಲ್ಲಿ: ಹುರಿಯತ್ ಕಾನ್ಫರೆನ್ಸ್ ಸಂಘಟನೆಯ ಶ್ರೀನಗರದಲ್ಲಿರುವ ಕಚೇರಿಯನ್ನು ರಾಷ್ಟ್ರೀಯಾ ತನಿಖಾ ಸಂಸ್ಥೆ (ಎನ್ಐಎ) ಅಧಿಕಾರಿಗಳು ಭಾನುವಾರ ಮುಟ್ಟುಗೋಲು ಹಾಕಿದ್ದಾರೆ.
ಕಚೇರಿಯ ಹೊರಗಡೆ ಗೋಡೆಗೆ ಅಧಿಕಾರಿಗಳು ನೋಟಿಸ್ ಅಂಟಿಸಿದ್ದು, “ವಿಚಾರಣೆ ಎದುರಿಸುತ್ತಿರುವ ಹುರಿಯತ್ನ ನಾಯಕರಾದ ನಯೀಮ್ ಹಾಗೂ ಅಹ್ಮದ್ ಖಾನ್ ಒಡೆತನದ ಈ ಕಟ್ಟಡವನ್ನು ಜಪ್ತಿ ಮಾಡಲಾಗಿದೆ. ದೆಹಲಿಯ ಪಟಿಯಾಲಾ ಹೌಸ್, ಎನ್ಐಎ ವಿಶೇಷ ನ್ಯಾಯಾಲಯ 2023ರ ಜ.27ರಂದು ಹೊರಡಿಸಿರುವ ಆದೇಶಕ್ಕೆ ಅನುಗುಣವಾಗಿ ಕ್ರಮ ಕೈಗೊಳ್ಳಲಾಗಿದೆ” ಎಂದು ಸೂಚಿಸಿದೆ.

26 ಪ್ರತ್ಯೇಕವಾದಿ ಸಂಘಟನೆಗಳ ಒಕ್ಕೂಟ ಸಂಘಟನೆಯಾಗಿರುವ ಹುರಿಯತ್, ಭಯೋತ್ಪಾದಕ ಚಟುವಟಿಕೆಗಳಿಗೆ ಹಣಕಾಸು ನೆರವು ನೀಡುತ್ತಿದೆ ಎನ್ನುವ ಆರೋಪದಲ್ಲಿ 2019ರಿಂದ ಈ ಸಂಘಟನೆಯ ಕಚೇರಿಯನ್ನು ಮುಚ್ಚಲಾಗಿದೆ.

Join Whatsapp
Exit mobile version