Home Uncategorized ನ್ಯೂಝಿಲ್ಯಾಂಡ್ ಸಂಸದರಾಗಿ ಸಂಸ್ಕೃತದಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಭಾರತೀಯ ಮೂಲದ ಡಾ. ಗೌರವ್ ಶರ್ಮಾ

ನ್ಯೂಝಿಲ್ಯಾಂಡ್ ಸಂಸದರಾಗಿ ಸಂಸ್ಕೃತದಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಭಾರತೀಯ ಮೂಲದ ಡಾ. ಗೌರವ್ ಶರ್ಮಾ

ಔಕ್ಲಾಂಡ್ : ನ್ಯೂಝಿಲ್ಯಾಂಡ್ ನೂತನ ಸಂಸತ್ತಿನಲ್ಲಿ ಭಾರತೀಯ ಮೂಲದ ಸಂಸದ ಡಾ. ಗೌರವ್ ಶರ್ಮಾ ಸಂಸದರಾಗಿ ಸಂಸ್ಕೃತ ಭಾಷೆಯಲ್ಲಿ ಪ್ರಮಾಣ ವಚನ ಸ್ವೀಕರಿಸಿ ಸುದ್ದಿಯಾಗಿದ್ದಾರೆ.

ಹ್ಯಾಮಿಲ್ಟನ್ ವೆಸ್ಟ್ ಕ್ಷೇತ್ರದಿಂದ ಲೇಬರ್ ಪಾರ್ಟಿಯಿಂದ ಶರ್ಮಾ ಆಯ್ಕೆಯಾಗಿದ್ದಾರೆ. ನ್ಯೂಝಿಲ್ಯಾಂಡ್ ಸಂಸತ್ತಿಗೆ ಆಯ್ಕೆಯಾದ ಪ್ರಥಮ ಭಾರತೀಯ ಎಂಬ ಹೆಗ್ಗಳಿಕೆಯನ್ನೂ ಅವರು ಹೊಂದಿದ್ದಾರೆ.

ಡಾ. ಶರ್ಮಾ ಅವರು ಮೊದಲು ನ್ಯೂಝಿಲ್ಯಾಂಡ್ ನ ಮಾತೃಭಾಷೆ ಮಾವೊರಿಯಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಬಳಿಕ ಸಂಸ್ಕೃತದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು ಎಂದು ವರದಿಯೊಂದು ತಿಳಿಸಿದೆ.

Join Whatsapp
Exit mobile version