Home ಟಾಪ್ ಸುದ್ದಿಗಳು ಪ್ರತೀ ಕ್ರಿಸ್ಮಸ್-ಹೊಸ ವರ್ಷಕ್ಕೆ ಕೊರೋನ ವೈರಸ್ ಹೆಸರಲ್ಲಿ ಹೆದರಿಸಿ ಕಾಟ ಕೊಡುವುದು ನಿಲ್ಲಲಿ: ಡಾ. ಶ್ರೀನಿವಾಸ...

ಪ್ರತೀ ಕ್ರಿಸ್ಮಸ್-ಹೊಸ ವರ್ಷಕ್ಕೆ ಕೊರೋನ ವೈರಸ್ ಹೆಸರಲ್ಲಿ ಹೆದರಿಸಿ ಕಾಟ ಕೊಡುವುದು ನಿಲ್ಲಲಿ: ಡಾ. ಶ್ರೀನಿವಾಸ ಕಕ್ಕಿಲ್ಲಾಯ

►ಉತ್ತರಾರ್ಧ ಗೋಳದಲ್ಲಿ ಡಿಸೆಂಬರ್ ಹವೆಗೆ ಕೆಮ್ಮು-ನೆಗಡಿ ಸಾಮಾನ್ಯ

ಮಂಗಳೂರು: ಕೇರಳದಲ್ಲಿ ಕೋವಿಡ್ ಉಪ ತಳಿ ಜೆಎನ್-1 ಪತ್ತೆಯಾಗಿದ್ದು, ರಾಜ್ಯದಲ್ಲಿಯೂ ಆತಂಕ ಆರಂಭವಾಗಿದೆ. ಹೀಗಾಗಿ ರಾಜ್ಯ ಆರೋಗ್ಯ ಇಲಾಖೆ ಕರ್ನಾಟಕದಲ್ಲಿ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.

ಈ ಬಗ್ಗೆ ಖ್ಯಾತ ವೈದ್ಯ ಡಾ. ಶ್ರೀನಿವಾಸ ಕಕ್ಕಿಲ್ಲಾಯ ಫೇಸ್ ಬುಕ್ ನಲ್ಲಿ ಪ್ರತಿಕ್ರಿಯೆ ನೀಡಿದ್ದು, ಉತ್ತರಾರ್ಧ ಗೋಳದಲ್ಲಿ ಡಿಸೆಂಬರ್ ಹವೆಗೆ ಕೆಮ್ಮು-ನೆಗಡಿ ಸಾಮಾನ್ಯ. ಹೊಸ ಕೊರೋನ ವೈರಸ್ ಪದೇ ಪದೇ ಸಣ್ಣ ಮಟ್ಟಿಗೆ ರೂಪ ಬದಲಿಸುವುದು ಕೂಡ ಸಾಮಾನ್ಯವೇ. ಕೇರಳ ರಾಜ್ಯ ಕೊರೋನ ಪರೀಕ್ಷೆ ನಿಲ್ಲಿಸಲಿ. ಪ್ರತೀ ಕ್ರಿಸ್ಮಸ್-ಹೊಸ ವರ್ಷಕ್ಕೆ ವೈರಸ್ ಹೆಸರಲ್ಲಿ ಹೆದರಿಸಿ ಕಾಟ ಕೊಡುವುದು ನಿಲ್ಲಲಿ. ವಿಶ್ವದ ಯಾವುದೇ ಭಾಗದಲ್ಲೂ ಹೇರದ ನಿಯಮಗಳನ್ನು ಕರ್ನಾಟಕದಲ್ಲಿ ಮಾತ್ರ ಹೇರುವುದು ಅನಗತ್ಯ, ಅವಮಾನಕರ. ಅಂತೂ 2020ರ ಮಾರ್ಚ್ ನಿಂದ ಮಾಡಿದ ಲಾಕ್ ಡೌನ್, ಮಾಸ್ಕ್ ನಿಯಮ, ಒತ್ತಾಯದಿಂದ ಹಾಕಿಸಿದ ಲಸಿಕೆ ಯಾವುವೂ ಪ್ರಯೋಜನವಾಗಲಿಲ್ಲ, ಕೊರೋನ ತಡೆಯಲು ಆಗಲಿಲ್ಲ ಎನ್ನುವುದನ್ನು ಪರೋಕ್ಷವಾಗಿ ಒಪ್ಪಿಕೊಂಡಂತಾಯಿತು, ಅದನ್ನು ಈ ಸರಕಾರಗಳು ಮತ್ತು ತಥಾಕಥಿತ ತಜ್ಞರು ನೇರವಾಗಿ ಒಪ್ಪಿಕೊಳ್ಳಲಿ ಎಂದು ಬರೆದುಕೊಂಡಿದ್ದಾರೆ.

Join Whatsapp
Exit mobile version