ನವದೆಹಲಿ: ಪ್ರಜಾಪ್ರಭುತ್ವದ ಕತ್ತುನ್ನು ಈ ಸರ್ಕಾರ ಹಿಸುಕಿದ್ದು, ಹಿಂದೆಂದೂ ಕೂಡ ಇಷ್ಟು ಪ್ರಮಾಣದಲ್ಲಿ ವಿರೋಧ ಪಕ್ಷದ ಸದಸ್ಯರನ್ನು ಸದನದಿಂದ ಅಮಾನತುಗೊಳಿಸಿಲ್ಲ ಎಂದು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅಸಮಾಧಾನ ವ್ಯಕ್ತಪಡಿಸಿದರು.
ವಿರೋಧ ಪಕ್ಷದ 141 ಸಂಸದರನ್ನು ಸರ್ಕಾರ ಅಮಾನತುಗೊಳಿಸಿರುವುದನ್ನು ಖಂಡಿಸಿದ ಅವರು, ಸಂಪೂರ್ಣವಾಗಿ ಸಮಂಜಸವಾದ ಮತ್ತು ನ್ಯಾಯಸಮ್ಮತವಾದ ಬೇಡಿಕೆಗೆ ಒತ್ತಾಯಿಸಿದ್ದಕ್ಕಾಗಿ ಹಿಂದೆಂದೂ ಇಷ್ಟು ವಿರೋಧ ಪಕ್ಷದ ಸಂಸದರನ್ನು ಸದನದಿಂದ ಅಮಾನತುಗೊಳಿಸಿಲ್ಲ ಎಂದು ವಾಗ್ದಾಳಿ ನಡೆಸಿದರು. ಡಿಸೆಂಬರ್ 13ರಂದು ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಭಾರಿ ಭದ್ರತಾ ಲೋಪ ಉಂಟಾಗಿದೆ. ಲೋಕಸಭೆ ಕಲಾಪ ನಡೆಯುತ್ತಿದ್ದ ಸಮಯದಲ್ಲಿ ಇಬ್ಬರು ಯುವಕರು ಸದನದೊಳಗೆ ನುಗ್ಗಿ ಕಲಾಪಕ್ಕೆ ತೀವ್ರ ಅಡ್ಡಿ ಉಂಟು ಮಾಡಿರುವುದು ಅಕ್ಷಮ್ಯ ಮತ್ತು ಸಮರ್ಥನೀಯವಲ್ಲ ಎಂದರು.
#WATCH | CPP chairperson Sonia Gandhi addresses the Congress Parliamentary Party meeting at Central Hall of Sanvidhan Sadan, Parliament House pic.twitter.com/KlV0I7qmg4
— ANI (@ANI) December 20, 2023