Home ಟಾಪ್ ಸುದ್ದಿಗಳು ‘ಗೂಗಲ್ ಮ್ಯಾಪ್’ನಲ್ಲಿ ಜ್ಞಾನವಾಪಿ ಮಸೀದಿಯನ್ನು ಜ್ಞಾನವಾಪಿ ದೇವಾಲಯ ಎಂದು ಪರಿಷ್ಕರಿಸುವಂತೆ ವಿದ್ಯಾರ್ಥಿಗಳಿಗೆ ನ್ಯೂ ಹಾರಿಜಾನ್ ಪಬ್ಲಿಕ್...

‘ಗೂಗಲ್ ಮ್ಯಾಪ್’ನಲ್ಲಿ ಜ್ಞಾನವಾಪಿ ಮಸೀದಿಯನ್ನು ಜ್ಞಾನವಾಪಿ ದೇವಾಲಯ ಎಂದು ಪರಿಷ್ಕರಿಸುವಂತೆ ವಿದ್ಯಾರ್ಥಿಗಳಿಗೆ ನ್ಯೂ ಹಾರಿಜಾನ್ ಪಬ್ಲಿಕ್ ಶಾಲೆಯಿಂದ ಇಮೇಲ್ !

ಬೆಂಗಳೂರು: ಗೂಗಲ್ ಮ್ಯಾಪ್ ನಲ್ಲಿ ಜ್ಞಾನವಾಪಿ ಮಸೀದಿಯನ್ನು ಜ್ಞಾನವಾಪಿ ದೇವಾಲಯ ಎಂದು ಪರಿಷ್ಕರಿಸುವಂತೆ ತನ್ನ ಹಳೆ ವಿದ್ಯಾರ್ಥಿಗಳಿಗೆ ಬೆಂಗಳೂರಿನ ನ್ಯೂ ಹಾರಿಜಾನ್ ಪಬ್ಲಿಕ್ ಶಾಲೆ ಈ-ಮೇಲ್ ರವಾನಿಸಿರುವುದು ವಿವಾದಕ್ಕೆ ಕಾರಣವಾಗಿದೆ. ನೀವು ಇದನ್ನು ನಿಮ್ಮ ಹಿಂದೂ ಸಹೋದರ ಸಹೋದರಿಯರಿಗೂ ಕಳುಹಿಸಿ ಪರಿಷ್ಕರಿಸುವಂತೆ ಸಲಹೆ ನೀಡಿ ಎಂದು ಈ ಮೇಲ್ ನಲ್ಲಿ ಕೋರಲಾಗಿದೆ.


ಬೆಂಗಳೂರಿನ ನ್ಯೂ ಹಾರಿಜಾನ್ ಪಬ್ಲಿಕ್ ಶಾಲೆ ವಿದ್ಯಾರ್ಥಿಗಳಿಗೆ ರವಾನಿಸಿರುವ ಈ ಮೇಲ್ ಪತ್ರದಲ್ಲಿ, ನಿಮ್ಮ ಗೂಗಲ್ ಮ್ಯಾಪ್’ನಲ್ಲಿ ಜ್ಞಾನವಾಪಿ ಮಸೀದಿಯೆಂದು ಹುಡಕುವ ಬದಲಾಗಿ ಜ್ಞಾನವಾಪಿ ದೇವಾಲಯದವೆಂದು ನಮೂದಿಸಿ ಎಂದು ಸಲಹೆ ನೀಡಿದೆ. ಅಲ್ಲದೇ ಈ ಸಲಹೆಯನ್ನು ನಿಮ್ಮ ಹಿಂದೂ ಸಹೋದರ ಸಹೋದರಿಯರಿಗೂ ನೀಡಿ ಎಂದು ವಿನಂತಿಸಿದೆ.


ರವಾನಿಸಿರುವ ಈ ಮೇಲ್ ಪತ್ರವನ್ನು ಟ್ವಿಟರ್’ನಲ್ಲಿ ಹಂಚಿರುವ ಹಾರಿಝಾನ್ ಶಾಲೆಯ ಹಳೆ ವಿದ್ಯಾರ್ಥಿನಿ ಕಾರ್ತಿಕ ನಂಬೂತಿರಿ , ಬೆಂಗಳೂರಿನ ನನ್ನ ಹಳೆ (ನ್ಯೂ ಹಾರಿಜಾನ್) ಶಾಲೆಯು ಧಾರ್ಮಿಕ ದ್ವೇಷ ಮತ್ತು ವಿಭಜನೆಯನ್ನು ಪ್ರಚೋದಿಸಲು ನಮಗೆ ಇಮೇಲ್ ಗಳನ್ನು ರವಾನಿಸಿದೆ , ನನಗೆ ನಾಚಿಕೆಯಾಗುತ್ತಿದೆ ಎಂದು ಹಾರಿಝಾನ್ ಶಾಲೆಯ ವಿರುದ್ದ ಕಿಡಿಕಾರಿದ್ದಾರೆ.


ಈ ಬಗ್ಗೆ ಟ್ವೀಟ್ ಮಾಡಿರುವ ಸಾಮಾಜಿಕ ಕಾರ್ಯಕರ್ತ ಮುಹಮ್ಮದ್ ಝುಬೈರ್, ಹಿಂದೂ-ಮುಸ್ಲಿಮರನ್ನು ಶಿಕ್ಷಣ ಸಂಸ್ಥೆಯು ವಿಭಜಿಸುವ ಮತ್ತು ದ್ವೇಷವನ್ನು ಪ್ರಚೋದಿಸುತ್ತಿದೆ ಎಂದು ಆರೋಪಿಸಿದ್ದಾರೆ.

Join Whatsapp
Exit mobile version