Home ಕರಾವಳಿ ಅಮೃತ ವಿಶ್ವವಿದ್ಯಾಲಯದಲ್ಲಿ ಪೂರ್ಣ ಪ್ರಮಾಣದ ತರಬೇತಿ ಆರಂಭ

ಅಮೃತ ವಿಶ್ವವಿದ್ಯಾಲಯದಲ್ಲಿ ಪೂರ್ಣ ಪ್ರಮಾಣದ ತರಬೇತಿ ಆರಂಭ

ಮಂಗಳೂರು: ಅಮೃತ ವಿದ್ಯಾಲಯವು ಒಂದು ವಿಶ್ವವಿದ್ಯಾನಿಲಯ ಆಗಿದ್ದು, ಹೊಸದಾಗಿ ಎಂಟು ವರುಷಗಳ ವಿಶ್ವವಿದ್ಯಾನಿಲಯ ಪರೀಕ್ಷೆಯ ಕಲಿಕೆಯನ್ನು ಆರಂಭಿಸಿದ್ದು, ಪೂರ್ಣ ಪ್ರಮಾಣದ ತರಬೇತಿ ಮೊದಲ ಬಾರಿಗೆ ವಿದ್ಯಾಲಯದಲ್ಲಿ ಆರಂಭವಾಗುತ್ತಿದೆ. ಗ್ರೇಡ್ ಸರ್ಟಿಫಿಕೇಟ್ ಕೋರ್ಸ್ ಆರಂಭಿಸಲಾಗಿದೆ ಎಂದು ಪ್ರಾಂಶುಪಾಲರಾದ ಆರತಿ ಶೆಟ್ಟಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನಾ ಆಟಗಳಿಗೆ ಫುಟ್ಬಾಲ್, ಕ್ರಿಕೆಟ್ ಇತ್ಯಾದಿ ತರಬೇತಿಗೆ ಇಲ್ಲಿ ಜಾಗ ಸಿದ್ಧವಾಗಿದೆ. ಆರ್ಚರಿ ತರಬೇತಿಗೆ ಕೂಡ ವೇದಿಕೆ ಸಿದ್ಧವಾಗಿದೆ. ಸರ್ಫಿಂಗ್ ಕ್ಲಬ್ ಕಟ್ಟಲು ಎಲ್ಲ ಬಗೆಯ ತಯಾರಿ ನಡೆದಿದೆ. ನಮ್ಮಲ್ಲಿ ಈಗಾಗಲೇ ಅಥ್ಲೆಟಿಕ್ಸ್ ತರಬೇತಿ ನಡೆಯುತ್ತಿದೆ. ನಮ್ಮಲ್ಲಿ ಸ್ಟೇಜ್ ಶೋ ತರಬೇತಿಗೆ ಅವಕಾಶ ಮಾಡಿಕೊಡುವುದಾಗಿ ಎಲ್ಲ ತಯಾರಿ ನಡೆಸಿದ್ದೇವೆ ಎಂದು  ಯತೀಶ್ ಬೈಕಂಪಾಡಿ ಹೇಳಿದರು.

ಡೇಕೇರ್ ಸೆಂಟರ್ ಬೇಕು ಎಂದು ಸ್ಥಳೀಯರು ಬಯಸಿದರು. ಅದಕ್ಕಾಗಿ ಅದನ್ನು ಆರಂಭಿಸುತ್ತಿದ್ದೇವೆ. ನಮ್ಮ ಶಾಲೆಯಲ್ಲಿ ಡೊನೇಶನ್ ತೆಗೆದುಕೊಳ್ಳುವುದಿಲ್ಲ ಎಂದೂ ಯತೀಶ್ ಬೈಕಂಪಾಡಿ ಹೇಳಿದರು.

ಶಾಲೆಯಲ್ಲಿ ವಿದ್ಯಾರ್ಥಿ ವೇತನ ನೀಡುವ ಕ್ರಮವಿದೆ. ಪಡೆದ ಅಂಕದ ಮೇಲೆ ಶುಲ್ಕದಲ್ಲಿ ವಿನಾಯಿತಿ ಇದೆ. ಅಮೃತ ಸರ್ಟಿಫಿಕೇಟ್ ನೀಡುವಲ್ಲಿ ಸಂಸ್ಕೃತಿಯ ಆಧಾರದ ಮೇಲಿನ ಸರ್ಟಿಫಿಕೇಟ್ ಕೋರ್ಸ್‌ಗಳಿಗೂ ಅವಕಾಶ ನೀಡಲಾಗುತ್ತದೆ. ನವೀನವಾದ ಅಟಲ್ ಟಿಂಕರಿಂಗ್ ಲ್ಯಾಬ್ ಸಹ ನಮ್ಮಲ್ಲಿದ್ದು ಅದು ಉದ್ಯಮಶೀಲತೆ ಉತ್ತೇಜಿಸುವ ಗುರಿ ಹೊಂದಿದೆ ಎಂದು ಆರತಿಯವರು ಹೇಳಿದರು.

2022-23 ಶೈಕ್ಷಣಿಕ ಸಾಲಿನಲ್ಲಿ ಅನೇಕ ಹೊಸ ಸುಧಾರಣೆಗಳನ್ನು ಪರಿಚಯಿಸಲಾಗಿದೆ. ಇಲ್ಲಿ ನೃತ್ಯ ಕಲಿಕೆಗೆ ಇತರ ಶಾಲೆಗಳ ಮಕ್ಕಳಿಗೂ ಅವಕಾಶ ತೆರೆದಿದೆ. ಮಕ್ಕಳು ಬರೇ ಪಠ್ಯ ಕಲಿತು ಕೌಶಲ್ಯ ಮರೆಯಬಾರದು ಎನ್ನುವುದಕ್ಕಾಗಿ ಈ ಎಲ್ಲ ಪಠ್ಯೇತರ ಚಟುವಟಿಕೆಗಳಿಗೆ ಅಮೃತ ವಿದ್ಯಾಲಯವು ಮನಸ್ಸು ಮಾಡಿದೆ ಎಂದು ಅವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ನಿರ್ವಾಹಕರಾದ ರಾಜನ್ ಉಪಸ್ಥಿತರಿದ್ದರು.

Join Whatsapp
Exit mobile version