Home ಟಾಪ್ ಸುದ್ದಿಗಳು ದೇಶದಲ್ಲಿ 6 ಮಂದಿಗೆ ಹೊಸ ರೂಪಾಂತರಿತ ಕೊರೊನ ವೈರಸ್ ಸೋಂಕು ದೃಢ; ಬೆಂಗಳೂರಿನಲ್ಲಿ 3 ಪ್ರಕರಣ

ದೇಶದಲ್ಲಿ 6 ಮಂದಿಗೆ ಹೊಸ ರೂಪಾಂತರಿತ ಕೊರೊನ ವೈರಸ್ ಸೋಂಕು ದೃಢ; ಬೆಂಗಳೂರಿನಲ್ಲಿ 3 ಪ್ರಕರಣ

ಬೆಂಗಳೂರು : ಬ್ರಿಟನ್ ನಿಂದ ಭಾರತಕ್ಕೆ ಹಿಂದಿರುಗಿದ ಆರು ಮಂದಿಗೆ ರೂಪಾಂತರಿತ ಕೊರೊನ ವೈರಸ್ ಸೋಂಕು ಇರುವುದು ದೃಢವಾಗಿದೆ. ಅದರಲ್ಲಿ ಮೂವರು ಬೆಂಗಳೂರಿನಲ್ಲೇ ಇದ್ದಾರೆ ಎಂದು ತಿಳಿದು ಬಂದಿದೆ.

ಆರು ಸೋಂಕಿತರ ಪೈಕಿ ಬೆಂಗಳೂರಿನಲ್ಲಿ ಮೂವರು, ಹೈದರಾಬಾದ್ ನಲ್ಲಿ ಇಬ್ಬರು, ಪುಣೆಯಲ್ಲಿ ಒಬ್ಬರಿಗೆ ಸೋಂಕು ಪತ್ತೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ಎಲ್ಲರನ್ನೂ ಪ್ರತ್ಯೇಕಿತ ಕೋಣೆಯಲ್ಲಿ ಏಕಾಂಗಿಯಾಗಿ ಇರಿಸಲಾಗಿದೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ.

ಈ ಹೊಸ ರೂಪಾಂತರಿತ ಕೊರೊನ ವೈರಸ್ ಶೇ.70ಕ್ಕಿಂತಲೂ ಹೆಚಚು ಸಾಂಕ್ರಾಮಿಕಗೊಳ್ಳುವ ಶಕ್ತಿ ಹೊಂದಿದೆ. ಪ್ರಸ್ತುತ ಇದು ಬ್ರಿಟನ್ ನಲ್ಲಿ ವ್ಯಾಪಕವಾಗಿದ್ದು, ಪರಿಸ್ಥಿತಿ ಕೈಮೀರಿ ಹೋಗುತ್ತಿದೆ ಎಂದು ಬ್ರಿಟನ್ ಸರಕಾರ ಇತ್ತೀಚೆಗೆ ಹೇಳಿತ್ತು. ಅಲ್ಲದೆ, ಲಂಡನ್ ಸೇರಿದಂತೆ ಬ್ರಿಟನ್ ನ ಹಲವೆಡೆ ಮತ್ತೊಮ್ಮೆ ಲಾಕ್ ಡೌನ್ ಘೋಷಿಸಲಾಗಿದೆ.

Join Whatsapp
Exit mobile version