ಉತ್ತರ ಪ್ರದೇಶದ ಅಸ್ತಿತ್ವಕ್ಕಾಗಿ ಹೋರಾಟ ನಡೆಸುತ್ತಿರುವ ಬಿಎಸ್ ಪಿ ಕಳೆದ ಡಿಸೆಂಬರ್ ನಲ್ಲಿ ಹೊಸ ಉತ್ತರಾಧಿಕಾರಿಯನ್ನಾಗಿ ಮಾಯಾವತಿ ಸೋದರಳಿಯ ಆಕಾಶ್ ಆನಂದ್ ರನ್ನು ನೇಮಕ ಮಾಡಿತ್ತು. ಇದೀಗ ಐದು ತಿಂಗಳಲ್ಲೇ ಆಕಾಶ್ ಗದ್ದುಗೆಯಿಂದ ಕೆಳಗಿಳಿದಿದ್ದಾರೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ರಾಜಕೀಯಕ್ಕೆ ಪ್ರವೇಶಿಸಿದ್ದ ಆಕಾಶ್ ಆನಂದ್ ಮಾಯಾವತಿಯ ಬಹುತೇಕ ಎಲ್ಲಾ ರಾಜಕೀಯ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದರು. ಆದರೆ ಮಾಯಾವತಿ ಈ ನಿರ್ಧಾರ ತೆಗೆದುಕೊಳ್ಳಲು ಇದ್ದ ಕಾರಣವೇನೆಂಬುದು ಎಂಬುದು ಬಹಿರಂಗವಾಗಬೇಕಿದೆ.
ಸೀತಾಪುರದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಆಕಾಶ್ ಆನಂದ್ ಬಿಜೆಪಿ ನಾಯಕರನ್ನು ಭಯೋತ್ಪಾದಕರಿಗೆ ಹೋಲಿಸಿದ್ದರು. ಆಕಾಶ್ ಆನಂದ್ ಅವರ ಈ ಉದ್ರೇಕಕಾರಿ ಭಾಷಣದ ನಂತರ, ಅವರ ವಿರುದ್ಧ ಪ್ರಕರಣವನ್ನು ದಾಖಲಿಸಲಾಯಿತು, ಅದರಲ್ಲಿ ಪಕ್ಷದ ಮೂವರು ಅಭ್ಯರ್ಥಿಗಳನ್ನೂ ಹೆಸರಿಸಲಾಯಿತು. ಇದನ್ನು ಗಂಭೀರವಾಗಿ ಪರಿಗಣಿಸಿದ ಬಿಎಸ್ಪಿ ವರಿಷ್ಠೆ ಮಾಯಾವತಿ ಆಕಾಶ್ ಆನಂದ್ ಪ್ರಚಾರಕ್ಕೆ ನಿಷೇಧ ಹೇರಿದ್ದರು.