Home ಟಾಪ್ ಸುದ್ದಿಗಳು ಪತಂಜಲಿ ಉತ್ಪನ್ನ ಸೇರಿದಂತೆ ಭಾರತದ 16 ಕಂಪನಿಗಳಿಂದ ಔಷಧ ಆಮದಿಗೆ ನಿಷೇಧ ಹೇರಿದ ನೇಪಾಳ

ಪತಂಜಲಿ ಉತ್ಪನ್ನ ಸೇರಿದಂತೆ ಭಾರತದ 16 ಕಂಪನಿಗಳಿಂದ ಔಷಧ ಆಮದಿಗೆ ನಿಷೇಧ ಹೇರಿದ ನೇಪಾಳ

ನವದೆಹಲಿ: ಯೋಗ ಗುರು ರಾಮ್’ದೇವ್ ಅವರ ಪತಂಜಲಿ ಉತ್ಪನ್ನಗಳನ್ನು ತಯಾರಿಸುವ ದಿವ್ಯಾ ಫಾರ್ಮಸಿ ಸೇರಿದಂತೆ 16 ಭಾರತೀಯ ಔಷಧೀಯ ಕಂಪನಿಗಳಿಂದ ಔಷಧ ಆಮದಿಗೆ ನೇಪಾಳ ನಿಷೇಧ ಹೇರಿದೆ.

ಅಲೋಪಥಿಕ್ ಮತ್ತು ಆಯುರ್ವೇದ ಎರಡೂ ಔಷಧ ಮಾರುಕಟ್ಟೆಗಳ ರಾಷ್ಟ್ರೀಯ ನಿಯಂತ್ರಕ ಸಂಸ್ಥೆಯಾದ ನೇಪಾಳದ ಔಷಧ ಆಡಳಿತ ಇಲಾಖೆಯು ಈ ಪಟ್ಟಿಯನ್ನು ಪ್ರಕಟಿಸಿದ್ದು, ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್ ಒ) ಉತ್ತಮ ಉತ್ಪಾದನಾ ಪದ್ಧತಿಗಳನ್ನು ಅನುಸರಿಸಲು  ವಿಫಲವಾದದ್ದರಿಂದ ಆ ಕಂಪನಿಗಳು ತಯಾರಿಸಿದ ಔಷಧಿಗಳನ್ನು ನೇಪಾಳಕ್ಕೆ ಆಮದು ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ದಿ ಕಠ್ಮಂಡು ಪೋಸ್ಟ್ ದೈನಿಕ ವರದಿ ಮಾಡಿದೆ.

ಎಪ್ರಿಲ್ ಮತ್ತು ಜುಲೈನಲ್ಲಿ, ನೇಪಾಳಕ್ಕೆ ತಮ್ಮ ಉತ್ಪನ್ನಗಳನ್ನು ಪೂರೈಸಲು ಅರ್ಜಿ ಸಲ್ಲಿಸಿದ ಔಷಧೀಯ ಕಂಪನಿಗಳ ಉತ್ಪಾದನಾ ಸೌಲಭ್ಯಗಳ ಬಗ್ಗೆ ತನಿಖೆ ನಡೆಸಲು ಇಲಾಖೆಯು ಔಷಧ ಪರಿವೀಕ್ಷಕರ ತಂಡವನ್ನು ಭಾರತಕ್ಕೆ ಕಳುಹಿಸಿತ್ತು. ಕಂಪನಿಗಳ ಉತ್ಪಾದನಾ ಸೌಲಭ್ಯಗಳ ಪರಿಶೀಲನೆಯ ನಂತರ ಈ  ಪಟ್ಟಿಯನ್ನು ಪ್ರಕಟಿಸಿದ್ದೇವೆ ಎಂದು ಇಲಾಖೆಯ ವಕ್ತಾರ ಸಂತೋಷ್ ಕೆಸಿ ಹೇಳಿದ್ದಾರೆ.

Join Whatsapp
Exit mobile version