Home ಟಾಪ್ ಸುದ್ದಿಗಳು ಇಡಿ ಅಂದರೆ ಬಿಜೆಪಿಯ ಎಲೆಕ್ಷನ್ ಡಿಪಾರ್ಟ್ಮೆಂಟ್; ಬಿಜೆಪಿ ವಿರುದ್ಧ ಹರಿಹಾಯ್ದ ಬಿ.ಕೆ ಹರಿಪ್ರಸಾದ್

ಇಡಿ ಅಂದರೆ ಬಿಜೆಪಿಯ ಎಲೆಕ್ಷನ್ ಡಿಪಾರ್ಟ್ಮೆಂಟ್; ಬಿಜೆಪಿ ವಿರುದ್ಧ ಹರಿಹಾಯ್ದ ಬಿ.ಕೆ ಹರಿಪ್ರಸಾದ್

ಬೆಳಗಾವಿ: ಇಡಿ ಅಂದರೆ ಬಿಜೆಪಿ ಎಲೆಕ್ಷನ್ ಡಿಪಾರ್ಟ್ಮೆಂಟ್, ಐಟಿ ಅಂದರೆ ಇಂಟಲಿಜೆನ್ಸ್ ಡಿಪಾರ್ಟ್ಮೆಂಟ್ ಹಾಗೂ ಸಿಬಿಐ ಬಿಜೆಪಿ ಮುಂಚೂಣಿ ಘಟಕವಾಗಿದೆ ಎಂದು ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಬಿ.ಕೆ ಹರಿ ಪ್ರಸಾದ್ ಟೀಕಿಸಿದ್ದಾರೆ.


ಸುವರ್ಣ ಸೌಧದಲ್ಲಿ ಮಂಗಳವಾರ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮೇಲೆ ಸಿಬಿಐ ದಾಳಿ ಬಗ್ಗೆ ಪ್ರತಿಕ್ರಿಸಿದ ಅವರು, ಐಟಿ ಅಂದರೆ ಅವರ ಇಂಟಲಿಜೆಂಟ್ ಡಿಪಾರ್ಟ್ಮೆಂಟ್ ಆಗಿ ಕೆಲಸ ಮಾಡುತ್ತಿದೆ. ಸಿಬಿಐ ಕೂಡಾ ಬಿಜೆಪಿ ವಿರೋಧಿಗಳ ವಿರುದ್ಧ ದೊಡ್ಡ ಅಸ್ತ್ರ ಇಟ್ಟುಕೊಂಡು ಬಾಯಿ ಬಿಡಿಸಲು ಪ್ರಯತ್ನ ಮಾಡುತ್ತಿದೆ. ಆದರೆ ನಾವು ಭಯ ಪಡಲ್ಲ ಎಂದು ಆಕ್ರೋಶ ವ್ಯಕ್ಪಡಿಸಿದರು.


ಗಡಿ ವಿವಾದ ಇರುವಾಗ ಆ ಪ್ರದೇಶದ ಹಾಗೂ ಸ್ವಾತಂತ್ರ್ಯ ಹೋರಾಟದ ವಿರುದ್ಧ ಇದ್ದ ವ್ಯಕ್ತಿಯ ಫೋಟೋ ಹಾಕಿರುವುದು ನೋಡಿದಾಗ ನಗಬೇಕೋ ಅಳಬೇಕೋ ಗೊತ್ತಾಗುತ್ತಿಲ್ಲ. ಬಿಜೆಪಿಗೆ ಪ್ರಜಾಪ್ರಭುತ್ವ ಸಂವಿಧಾನದಲ್ಲಿ ನಂಬಿಕೆ ಇಲ್ಲ ಎಂದು ವಾಗ್ದಾಳಿ ನಡೆಸಿದರು.


ಸಾವರ್ಕರ್ ಫೋಟೋ ವಿವಾದದ ವಿಚಾರವಾಗಿ ಕಾಂಗ್ರೆಸ್ ಮುಖಂಡರ ನಡುವಿನ ಗೊಂದಲ ಕುರಿತಾಗಿ ಮಾತನಾಡಿ, ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ವಿರುದ್ಧ ಹುಳಿ ಹಿಂಡುವ ಕೆಲಸ ಆಗಬಾರದು. ಸರ್ಕಾರ ತೀರ್ಮಾನ ಕೈಗೊಂಡಾಗ ನಾವು ಕತ್ತಿನ ಪಟ್ಟಿ ಹಿಡಿಯಲು ಆಗಲ್ಲ. ನಾವು ನಾಗಪುರ ಯುನಿವರ್ಸಿಟಿಯವರಲ್ಲ. ನಾವು ಜನಸಾಮಾನ್ಯರ ವಿವಿಯವರು ಎಂದು ಹೇಳಿದರು.

Join Whatsapp
Exit mobile version