ನವದೆಹಲಿ: ಸುಧಾರಿತ ಹವಾಮಾನ ವಿಜ್ಞಾನವು ಪಾಕೃತಿಕ ವಿಕೋಪಗಳಿಂದ ಆಗುವ ಹಾನಿಯನ್ನು ಕಡಿಮೆ ಮಾಡಲು ಸಹಾಯಕವಾಗಿದೆ. ಅದೇ ರೀತಿ ಭೂಕಂಪನದ ಎಚ್ಚರಿಕೆ ನೀಡುವ ತಂತ್ರಜ್ಞಾನವನ್ನೂ ಅಭಿವೃದ್ದಿಪಡಿಸುವ ಅಗತ್ಯವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
- Advertisement -
ಭಾರತೀಯ ಹವಾಮಾನ ಇಲಾಖೆಯ 150 ನೇ ವರ್ಷಾಚರಣೆಯಲ್ಲಿ ಪಾಲ್ಗೊಂಡು, ‘ಮಿಷನ್ ಮ್ಯೂಸಿಯಂ’ ಯೋಜನೆಗೆ ಚಾಲನೆ ನೀಡಿದರು.
ಅತ್ಯಾಧುನಿಕ ಹವಾಮಾನ ಕಣ್ಗಾವಲು ತಂತ್ರಜ್ಞಾನಗಳು ಮತ್ತು ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸುವುದು, ಹೆಚ್ಚಿನ ರೆಸಲ್ಯೂಶನ್‌ನ ವಾತಾವರಣ ವೀಕ್ಷಣೆಯ ಸಾಧನಗಳು, ಮುಂದಿನ ಪೀಳಿಗೆಯ ರಾಡಾರ್, ಉಪಗ್ರಹಗಳು ಮತ್ತು ಉನ್ನತ-ಕಾರ್ಯಕ್ಷಮತೆಯ ಕಂಪ್ಯೂಟರ್‌ಗಳನ್ನು ಕಾರ್ಯಗತಗೊಳಿಸುವುದು ಇದರ ಉದ್ದೇಶವಾಗಿದೆ.
- Advertisement -