Home ಟಾಪ್ ಸುದ್ದಿಗಳು ಮೋದಿ ಭೇಟಿಗೂ ಮುನ್ನ ಛತ್ತೀಸ್‌ಗಢದಲ್ಲಿ ನಕ್ಸಲೀಯರ ಅಟ್ಟಹಾಸ

ಮೋದಿ ಭೇಟಿಗೂ ಮುನ್ನ ಛತ್ತೀಸ್‌ಗಢದಲ್ಲಿ ನಕ್ಸಲೀಯರ ಅಟ್ಟಹಾಸ

ಛತ್ತೀಸ್‌ಗಢ: ಚುನಾವಣಾ ಪ್ರಚಾರಕ್ಕಾಗಿ ಕಂಕೇರ್‌ನಲ್ಲಿ ಸಾರ್ವಜನಿಕ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಲು ಪ್ರಧಾನಿ ನರೇಂದ್ರ ಮೋದಿ ಆಗಮಿಸುವ ಮುನ್ನ ಮೂವರು ಗ್ರಾಮಸ್ಥರನ್ನು ನಕ್ಕಲೀಯರು ಹತ್ಯೆ ಮಾಡಿದ್ದಾರೆ.

ಮಹಾರಾಷ್ಟ್ರದ ಗಡ್ಚಿರೋಲಿ ಜಿಲ್ಲೆಗೆ ಹೊಂದಿಕೊಂಡಿರುವ ಛೋಟೆಬೆಥಿಯಾ ಪೊಲೀಸ್‌ ಠಾಣೆ ವ್ಯಾಪ್ತಿಯ ಮೋರ್ಖಂಡಿ ಗ್ರಾಯದ ನಿವಾಸಿಗಳಾದ ಕುಲ್ಲೆ ಕಟ್ಲಾಮಿ(35), ಮನೋಜ್‌ ಕೊವಾಚಿ(22) ಮತ್ತು ದುಗ್ಗೆ ಕೊವಾಚಿ(27) ಅವರನ್ನು ನಕ್ಸಲೀಯರು ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಚೋಟ್ಬೆಟಿಯಾ ಪೊಲೀಸ್ ಠಾಣಾ ವ್ಯಾಪ್ತಿಯ ಮೋರ್ಖಂಡಿ ಗ್ರಾಮದಲ್ಲಿ ಬುಧವಾರ ರಾತ್ರಿ ಅಥವಾ ಗುರುವಾರ ಬೆಳಿಗ್ಗೆ ಸಮಯದಲ್ಲಿ ಕೊಲೆ ನಡೆದಿರಬಹುದು ಎಂದು ತಿಳಿದು ಬಂದಿದೆ.

ಹತ್ಯೆಯಾದ ಸ್ಥಳದಲ್ಲಿ ಎಸೆಯಲಾದ ಕರಪತ್ರಗಳಲ್ಲಿ, ಈ ಮೂವರು ಮಹಾರಾಷ್ಟ್ರ ಪೊಲೀಸರ ವಿರೋಧಿ ಘಟಕವಾರ ಸಿ-60 ಗೆ ಮಾಹಿತಿದಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಬರೆಯಲಾಗಿದೆ ಎಂದು ತಿಳಿದು ಬಂದಿದೆ.

ಛತ್ತೀಸ್‌ಗಢದಲ್ಲಿ ನವೆಂಬರ್ 7 ಮತ್ತು ನವೆಂಬರ್ 17 ರಂದು ಎರಡು ಹಂತಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಡಿಸೆಂಬರ್ 3 ರಂದು ಮತ ಎಣಿಕೆ ನಡೆಯಲಿದೆ.

Join Whatsapp
Exit mobile version