Home ಟಾಪ್ ಸುದ್ದಿಗಳು ಮಂಗಳನ ಅಂಗಳದಲ್ಲಿ ಇಳಿದ ರೋವರ್ | ನಾಸಾ ಬಿಡುಗಡೆ ಮಾಡಿದ ‘ಮೈನವಿರೇಳಿಸುವ’ ವೀಡಿಯೊ ನೋಡಿ!

ಮಂಗಳನ ಅಂಗಳದಲ್ಲಿ ಇಳಿದ ರೋವರ್ | ನಾಸಾ ಬಿಡುಗಡೆ ಮಾಡಿದ ‘ಮೈನವಿರೇಳಿಸುವ’ ವೀಡಿಯೊ ನೋಡಿ!

ನಾಸಾ ಸೋಮವಾರ ಮಂಗಳನಲ್ಲಿ ಬಾಹ್ಯಾಕಾಶ ನೌಕೆ ಇಳಿಯುವ ಮೊದಲ ಉತ್ತಮ-ಗುಣಮಟ್ಟದ ವೀಡಿಯೊವನ್ನು ಬಿಡುಗಡೆ ಮಾಡಿದೆ. ರೋಮಾಂಚನಗೊಳ್ಳುವಂತಹ  ಮೂರು  ನಿಮಿಷಗಳ ವೀಡಿಯೋದಲ್ಲಿ  ಕಿತ್ತಳೆ ಮತ್ತು ಬಿಳಿ ಬಣ್ಣದ ಪ್ಯಾರಚೂಟ್ ಮೂಲಕ ರೋವರ್ ಮಂಗಳ ಗೃಹಕ್ಕೆ ಇಳಿಯುವಂತಹ ಅದ್ಬುತ ದೃಶ್ಯವನ್ನು ತೋರಿಸುತ್ತದೆ.

ಪ್ರವೇಶ ಮತ್ತು ಕ್ಯಾಮರಾ ತಂಡದ ಮುಖ್ಯಸ್ಥ ಡೇವ್ ಗ್ರುಯೆಲ್ “ಇದು ಅದ್ಭುತವಾಗಿದೆ ನಾವು ಅದನ್ನು ನೋಡಿದಾಗೆಲ್ಲಾ ಅದು ರೋಮಾಂಚನವನ್ನು ಉಂಟುಮಾಡುತ್ತಿತ್ತು” ಎಂದು ಸಂತೋಷ ಹಂಚಿಕೊಂಡಿದ್ದಾರೆ.

“ಈ ವೀಡಿಯೊಗಳು ಮತ್ತು ಈ ಚಿತ್ರಗಳು ನಮ್ಮ ಕನಸುಗಳಾಗಿವೆ” ಎಂದು ಲ್ಯಾಂಡಿಂಗ್ ತಂಡದ ಉಸ್ತುವಾರಿ ವಹಿಸಿಕೊಂಡಿದ್ದ ಅಲ್ ಚೆನ್ ಹೇಳಿದ್ದಾರೆ.

ವಿಭಿನ್ನ ದೃಷ್ಟಿಕೋನಗಳಿಂದ ಮೇಲಕ್ಕೆ ಮತ್ತು ಕೆಳಕ್ಕೆ ನೋಡಲಾಗುವಂತಹ ಆರು ಆಫ್-ದಿ-ಶೆಲ್ಫ್ ಬಣ್ಣದ ಕ್ಯಾಮೆರಾಗಳನ್ನು ಪ್ರವೇಶ ಮತ್ತು ಇಳಿಯುವಿಕೆಗೆ ಅಳವಡಿಸಲಾಗಿತ್ತು. ಒಂದು ಕ್ಯಾಮೆರಾ ಹೊರತುಪಡಿಸಿ ಎಲ್ಲವೂ ಕೆಲಸ ಮಾಡಿದೆ. ಲ್ಯಾಂಡಿಂಗ್‌ಗಾಗಿ ಏಕೈಕ ಮೈಕ್ರೊಫೋನ್ ಆನ್ ಆಗಿತ್ತು. ಟಚ್‌ ಡೌನ್ ನಂತರ ನಾಸಾಗೆ ರೋವರ್‌ ನ ವ್ಯವಸ್ಥೆಗಳು ಮತ್ತು ಗಾಳಿ ಬೀಸುವಿಕೆಯ ತುಣುಕುಗಳ ಧ್ವನಿ ನಾಸಾಗೆ ಲಭ್ಯವಾಗಿದ್ದು ಆ ಆಡಿಯೋವನ್ನು ನಾಸಾ ಬಿಡುಗಡೆ ಮಾಡಿದೆ.

Perseverance Rover’s Descent and Touchdown on Mars (Official NASA Video)
Join Whatsapp
Exit mobile version