ಮಂಗಳೂರು : ಬಿಜೆಪಿ ಕರ್ನಾಟಕ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಟ್ವಿಟರ್ ನಲ್ಲಿ ಯಡವಟ್ಟು ಮಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಮತ್ತೆ ಟ್ರೋಲ್ ಗೆ ಗುರಿಯಾಗಿದ್ದಾರೆ. ಟೋಕಿಯೋ ಒಲಿಂಪಿಕ್ಸ್ ನಲ್ಲಿ ಭಾರತದ ಪ್ರಿಯಾ ಮಲ್ಲಿಕ್ ಅವರು ವರ್ಲ್ಡ್ ರೆಸ್ಲಿಂಗ್ ನಲ್ಲಿ ಚಿನ್ನದ ಪದಕ ಗೆದ್ದಿದ್ದಾರೆಂದು ತಮ್ಮ ಟ್ವಿಟರ್ ನಲ್ಲಿ ಶುಭಾಶಯ ಕೋರಿರುವ ಟ್ವೀಟ್ ವೈರಲ್ ಆಗಿದೆ.
ನಳೀನ್ ಪೋಸ್ಟ್ ಗೆ 60 ಕ್ಕೂ ಅಧಿಕ ಲೈಕ್ಸ್ ಮತ್ತು ಕಾಮೆಂಟ್ಸ್ ಗಳು ಬಂದ್ದಿದ್ದು ಸುದ್ದಿ ಸುಳ್ಳು ಮಾಹಿತಿ ತಿಳಿದ ಬಳಿಕ 15 ನಿಮಿಷದಲ್ಲಿ ಟ್ವಿಟರ್ ಪೋಸ್ಟ್ ಡಿಲೀಟ್ ಮಾಡಿದ್ದಾರೆ. ಇತ್ತೀಚ್ಚೆಗಷ್ಟೆ ಮುಖ್ಯಮಂತ್ರಿ ಬದಲಾವಣೆ ಕುರಿತು ತಮ್ಮ ಆಪ್ತರೊಂದಿಗೆ ನಡೆಸಿದ್ದಾರೆ ಎನ್ನಲಾದ ‘ಏರೆಗ್ಲಾ ಪನೋಡ್ಚಿ’ (ಯಾರಿಗೂ ಹೇಳಬೇಡ) ಎಂಬ ಆಡಿಯೋ ಕ್ಲಿಪ್ಪೊಂದು ಭಾರೀ ವೈರಲ್ ಆಗಿತ್ತು.
ಅದೇ ರೀತಿ ಸಂಸದ ತೇಜಸ್ವಿ ಸೂರ್ಯ ಕೂಡ ತಪ್ಪಾಗಿ ಟ್ವೀಟ್ ಮಾಡಿ ನಗೆಪಾಟಲಿಗೆ ಈಡಾಗಿದ್ದಾರೆ.