ನಾಗಪುರ ಯುನಿವರ್ಸಿಟಿಯ ಅಜೆಂಡಾವನ್ನು ಪಠ್ಯಪುಸ್ತಕದಲ್ಲಿ ಸೇರಿಸಲಾಗುತ್ತಿದೆ: ಪರಿಷತ್ ವಿಪಕ್ಷ ನಾಯಕ ಹರಿಪ್ರಸಾದ್ ವಾಗ್ದಾಳಿ

Prasthutha|

ಬೆಂಗಳೂರು: ನಾಗಪುರ ಯುನಿವರ್ಸಿಟಿಯ ಅಜೆಂಡಾವನ್ನು ಪಠ್ಯಪುಸ್ತಕದಲ್ಲಿ ಸೇರಿಸಲಾಗುತ್ತಿದೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

- Advertisement -

ಪಠ್ಯ ಪುಸ್ತಕದಲ್ಲಿ ಹೆಡ್ಗೆವಾರ್ ಭಾಷಣ ಸೇರ್ಪಡೆ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೆಡ್ಗೆವಾರ್ ದೇಶದಲ್ಲಿ ಕೋಮು ಭಾವನೆ ಬೆಳೆಸಿದ ವ್ಯಕ್ತಿ. ಆತ ಸ್ವಾತಂತ್ರ್ಯ ಹೋರಾಟಗಾರನೇ ಅಲ್ಲ, ಸ್ವಾತಂತ್ರ್ಯಕ್ಕಾಗಿ ತ್ಯಾಗ ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸ್ವಾತಂತ್ರ್ಯ ಹೋರಾಟದ ವಿರುದ್ಧವಾಗಿದ್ದವರು, ಧರ್ಮದ ಸಂಘಟನೆ ಮುಖ್ಯಸ್ಥರಾಗಿದ್ದವರನ್ನು ಇಂದು ವೈಭವೀಕರಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

- Advertisement -

ಸ್ವಾತಂತ್ರ್ಯ ಪ್ರೇಮಿ ಭಗತ್ ಸಿಂಗ್ , ಗುರು ನಾರಾಯಣ್, ಕುವೆಂಪುರುವರ ವಿಚಾರಗಳನ್ನು ಪಠ್ಯದಲ್ಲಿ ಕೈ ಬಿಟ್ಟಿರುವುದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಹರಿಪ್ರಸಾದ್ ಪ್ರತಿಕ್ರಿಯಿಸಿದ್ದಾರೆ.

ರಾಷ್ಟ್ರೀಯ ಶಿಕ್ಷಣ ನೀತಿಯ ಮೂಲಕ ಶಿಕ್ಷಣವನ್ನು ಇಂದು ಕೇಸರಿಕರಣ ಮಾಡಲಾಗುತ್ತಿದೆ. ಮಕ್ಕಳಲ್ಲಿ ವಿಷ ಬೀಜ ಬಿತ್ತುವ ಕೆಲಸ ನಡೀತಿದೆ. ಭವಿಷ್ಯತ್ತಿನಲ್ಲಿ ಭಯಾನಕ ವಾತಾವರಣ ಸೃಷ್ಟಿಮಾಡಲು ಹುನ್ನಾರ ನಡೆಯುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ಈ ಮಧ್ಯೆ ಮಡಿಕೇರಿಯಲ್ಲಿ ಶಾಲೆ ಆವರಣದಲ್ಲಿ ಗನ್ ತರಬೇತಿ ವಿವಾದದ ಕುರಿತು ಪ್ರತಿಕ್ರಿಯಿಸಿದ ಅವರು, ದಲಿತರು ಗನ್ ತರಬೇತಿ ಪಡೆದ ಕಾರಣಕ್ಕಾಗಿ ನಕ್ಸಲೈಟ್ ಪಟ್ಟ ಕಟ್ಟುತಾರೆ. ಮುಸ್ಲಿಮರು ಗನ್ ತರಬೇತಿ ಪಡೆದರೆ ಭಯೋತ್ಪಾದಕ ಎಂಬ ಪಟ್ಟ ಕಟ್ಟುತ್ತಾರೆ. ಅದೇ ಬಜರಂಗದಳದವರು ಗನ್ ತರಬೇತಿ ಆತ್ಮರಕ್ಷಣೆಗಾ? ಹೀಗೆ ಯಾರಾದರೂ ತರಬೇತಿ ಪಡೆಯುತ್ತಾರಾ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

ಎಲ್ಲರನ್ನೂ ರಕ್ಷಣೆ ಮಾಡಲು ಪೊಲೀಸ್ ಇಲಾಖೆ ಮತ್ತು ಮಿಲಿಟರಿ ವ್ಯವಸ್ಥೆ ಇದೆ. ಬಜರಂಗದಳದವರಿಂದ ರಕ್ಷಣೆ ಬೇಕಾಗಿಲ್ಲ. ಇದು ಕಾನೂನು ಬಾಹಿರ, ಸಂವಿಧಾನ ಬಾಹಿರ ಎಂದು ಕಿಡಿಗಾರಿದ್ದಾರೆ.

Join Whatsapp
Exit mobile version