Home ಟಾಪ್ ಸುದ್ದಿಗಳು ನಾಗ್ಪುರದಿಂದ ಹೊರಬಂದು ಜಗತ್ತನ್ನು ಅರಿಯಿರಿ: ಸಂಘಪರಿವಾರದ ಬಹಿಷ್ಕಾರ ಕರೆಗೆ ಕತಾರ್ ಏರ್’ವೇಸ್ ನಿಂದ ಟ್ರೋಲ್

ನಾಗ್ಪುರದಿಂದ ಹೊರಬಂದು ಜಗತ್ತನ್ನು ಅರಿಯಿರಿ: ಸಂಘಪರಿವಾರದ ಬಹಿಷ್ಕಾರ ಕರೆಗೆ ಕತಾರ್ ಏರ್’ವೇಸ್ ನಿಂದ ಟ್ರೋಲ್

ದೋಹ: ಕತಾರ್ ಏರ್’ವೇಸ್ ಅನ್ನು ಬಹಿಷ್ಕರಿಸುವ ಸಂಘಪರಿವಾರದ ಕರೆಗೆ ತನ್ನ ಅಧಿಕೃತ ವೆಬ್’ಸೈಟ್ ನಲ್ಲಿ ಪ್ರತಿಕ್ರಿಯಿಸಿದ ಕತಾರ್ ಏರ್’ವೇಸ್, ನಾಗ್ಪುರದಿಂದ ಹೊರಬಂದು ಜಗತ್ತನ್ನು ಅರಿಯಿರಿ ಎಂದು ಸಂಘಪರಿವಾರದ ಕಾಲೆಳೆದಿದೆ.

ಪ್ರವಾದಿ ಮುಹಮ್ಮದ್ ವಿರುದ್ದ ಅವಹೇಳನಕಾರಿ ಹೇಳಿಕೆ ನೀಡಿದ ಬಿಜೆಪಿ ಮಾಜಿ ವಕ್ತಾರೆಯ ನಡೆಗೆ ಆಕ್ರೋಶ ವ್ಯಕ್ತಪಡಿಸಿದ ಕತಾರ್, ಅಲ್ಲಿನ ಭಾರತೀಯ ರಾಯಭಾರಿಯನ್ನು ಕರೆಸಿ ಸಮನ್ಸ್ ನೀಡಿದ ದಿನದ ಬಳಿಕ ಕತಾರ್ ಏರ್’ವೇಸ್ ಬಹಿಷ್ಕರಿಸುವ ಕರೆಗೆ ಕತಾರ್ ಏರ್’ವೇಸ್ ವಿಮಾನ ಸಂಸ್ಥೆ ತನ್ನ ಅಧಿಕೃತ ವೆಬ್ ಸೈಟ್ ನಲ್ಲಿ ಸಂಘಪರಿವಾರವನ್ನು ಸಖತ್ ಟ್ರೋಲ್ ಮಾಡಿದೆ.

ಕತಾರ್ ಏರ್’ವೇಸ್ ತನ್ನ ವೆಬ್’ಸೈಟ್ ನ ಮುಖಪುಟದ ಜಾಹೀರಾತಿನಲ್ಲಿ ‘ನಾಗ್ಪುರದಿಂದ ಹೊರಬಂದು ವಾರದ ವಿಮಾನಗಳಲ್ಲಿ ಜಗತ್ತನ್ನು ಅರಿಯಲಿ ಎಂದು ವ್ಯಂಗ್ಯವಾಡಿದೆ.

Join Whatsapp
Exit mobile version