Home ಟಾಪ್ ಸುದ್ದಿಗಳು 90 ವರ್ಷದವರೆಗೂ ಸಕ್ರೀಯ ರಾಜಕೀಯದಲ್ಲಿ ಇರುತ್ತೇನೆ: ಯಡಿಯೂರಪ್ಪ

90 ವರ್ಷದವರೆಗೂ ಸಕ್ರೀಯ ರಾಜಕೀಯದಲ್ಲಿ ಇರುತ್ತೇನೆ: ಯಡಿಯೂರಪ್ಪ

ವಿಜಯಪುರ: 90 ವರ್ಷದವರೆಗೂ ಸಕ್ರೀಯ ರಾಜಕೀಯದಲ್ಲಿ ಇರುತ್ತೇನೆ ಎಂದು‌‌ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.
ವಾಯವ್ಯ ಶಿಕ್ಷಕರ ಹಾಗೂ ಪದವೀಧರ ಮೇಲ್ಮನೆ ಕ್ಷೇತ್ರದ ಅಭ್ಯರ್ಥಿಗಳ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಇನ್ನೂ ಹತ್ತು ವರ್ಷಗಳ ಕಾಲ ಬಿಜೆಪಿ ಪಕ್ಷದ ಬಲವರ್ಧನೆ ಹಾಗೂ ಪಕ್ಷದ ಸರ್ಕಾರ ರಚನೆಗಾಗಿ ಸಕ್ರಿಯ ರಾಜಕೀಯದಲ್ಲಿ‌ ಇರುತ್ತೇನೆ. ಪಕ್ಷದ ಕಾರ್ಯಕರ್ತರು ನನಗೆ 79 ವರ್ಷ ವಯಸ್ಸಾಯಿತು ಎಂದು ಆತಂಕ ಪಡುವ ಅಗತ್ಯವಿಲ್ಲ ಎಂದರು.

ವಿಧಾನಸಭೆಗೆ ಮುಂದಿನ ವರ್ಷ ನಡೆಯುವ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲು 145 ವಿಧಾನಸಭೆ ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿ ತರಲು ರಾಜ್ಯಾದ್ಯಂತ ಸುತ್ತಲಿದ್ದೇನೆ ಎಂದು ಹೇಳಿದರು.

Join Whatsapp
Exit mobile version