Home ಟಾಪ್ ಸುದ್ದಿಗಳು ಮಿಜೋರಾಂ ಏರ್ ಪೋರ್ಟ್ ನಲ್ಲಿ ಮ್ಯಾನ್ಮಾರ್ ಸೇನಾ ವಿಮಾನ ಪತನ

ಮಿಜೋರಾಂ ಏರ್ ಪೋರ್ಟ್ ನಲ್ಲಿ ಮ್ಯಾನ್ಮಾರ್ ಸೇನಾ ವಿಮಾನ ಪತನ

ಮಿಜೋರಾಂನ ಲೆಂಗ್ ಪುಯಿ ವಿಮಾನ ನಿಲ್ದಾಣದಲ್ಲಿ ಮ್ಯಾನ್ಮಾರ್ ಸೇನಾ ವಿಮಾನ ಪತನಗೊಂಡಿದೆ.


ಮಿಜೋರಾಂ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಪ್ರಕಾರ, ಬರ್ಮಾ ಸೇನೆಯ ವಿಮಾನ ಅಪಘಾತದಲ್ಲಿ ಕನಿಷ್ಠ ಆರು ಜನರು ಗಾಯಗೊಂಡಿದ್ದಾರೆ. ಪೈಲಟ್ ನೊಂದಿಗೆ ಒಟ್ಟು 14 ಮಂದಿ ವಿಮಾನದಲ್ಲಿದ್ದರು, ಆರು ಮಂದಿ ಗಾಯಗೊಂಡಿದ್ದಾರೆ, ಎಂಟು ಮಂದಿ ಸುರಕ್ಷಿತವಾಗಿದ್ದಾರೆ ಎಂದು ತಿಳಿಸಿದ್ದಾರೆ.


ಎಲ್ಲಾ ಗಾಯಾಳುಗಳನ್ನು ಲೆಂಗ್ ಪುಯಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಿಕ್ಕಿರುವ ಮಾಹಿತಿ ಪ್ರಕಾರ ಸೇನಾ ವಿಮಾನ ಲ್ಯಾಂಡಿಂಗ್ ವೇಳೆ ಪತನಗೊಂಡಿದೆ.

Join Whatsapp
Exit mobile version