Home ಟಾಪ್ ಸುದ್ದಿಗಳು ಭಾರತ್ ಜೋಡೊ ನ್ಯಾಯ ಯಾತ್ರೆಗೆ ಪೊಲೀಸರ ತಡೆ: ರಾಹುಲ್ ಗಾಂಧಿ ವಿರುದ್ಧ ಪ್ರಕರಣ ದಾಖಲಿಸಿ ಎಂದ...

ಭಾರತ್ ಜೋಡೊ ನ್ಯಾಯ ಯಾತ್ರೆಗೆ ಪೊಲೀಸರ ತಡೆ: ರಾಹುಲ್ ಗಾಂಧಿ ವಿರುದ್ಧ ಪ್ರಕರಣ ದಾಖಲಿಸಿ ಎಂದ ಸಿಎಂ ಹಿಮಂತ ಬಿಸ್ವಾ ಶರ್ಮಾ

ಗುವಾಹಟಿ: ಅಸ್ಸಾಂನಲ್ಲಿ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ನ್ಯಾಯ ಯಾತ್ರೆಗೆ ಪ್ರಮುಖ ಮಾರ್ಗಗಳ ಮೂಲಕ ಬರಲು ಪ್ರವೇಶ ನಿರಾಕರಿಸಿದ್ದಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಪೊಲೀಸರ ನಡುವೆ ಘರ್ಷಣೆ ಉಂಟಾಗಿದ್ದು, ಸ್ಥಳದಲ್ಲಿ ಪ್ರಕ್ಷುಬ್ಧ ಸ್ಥಿತಿ ನಿರ್ಮಾಣವಾಗಿದೆ.


ಈ ಹಿನ್ನೆಲೆಯಲ್ಲಿ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ರಾಹುಲ್ ಗಾಂಧಿ ವಿರುದ್ಧ ಪ್ರಕರಣ ದಾಖಲಿಸುವಂತೆ ಡಿಜಿಪಿಗೆ ಕೇಳಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.


ನ್ಯಾಯ ಯಾತ್ರೆಯು ಗುವಾಹಟಿಯ ಒಳ ರಸ್ತೆಗಳ ಮೂಲಕ ಹಾದು ಹೋಗಲು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ ಅನುಮತಿ ನಿರಾಕರಿಸಿದ್ದರು. ಇಂದು ಕೆಲಸದ ದಿನವಾಗಿರುವುದರಿಂದ ಗುವಾಹಟಿಯ ಮುಖ್ಯ ರಸ್ತೆಗಳಲ್ಲಿ ಯಾತ್ರೆ ಹಾದು ಹೋಗಲು ಅನುಮತಿ ನೀಡಿದರೆ ಸಂಚಾರ ದಟ್ಟಣೆ ಉಂಟಾಗುವ ಸಾಧ್ಯತೆ ಇದೆ. ಹೀಗಾಗಿ ಯಾತ್ರೆಯು ರಾಷ್ಟ್ರೀಯ ಹೆದ್ದಾರಿ ಮಾರ್ಗವನ್ನು ಬಳಸಬೇಕು ಎಂದು ಅಸ್ಸಾಂ ಸರ್ಕಾರವು ಸೂಚಿಸಿತ್ತು. ಆದರೆ, ಕ್ಷುಲ್ಲಕ ಕಾರಣ ನೀಡಿ ರಾಜ್ಯ ಸರ್ಕಾರವು ಗುವಾಹಟಿ ನಗರದೊಳಗೆ ಯಾತ್ರೆ ಪ್ರವೇಶಿಸಲು ಅನುಮತಿ ನಿರಾಕರಿಸುತ್ತಿದೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಆರೋಪಿಸಿದ್ದಾರೆ. ಪೊಲೀಸರು ಯಾತ್ರೆಯನ್ನು ನಗರಕ್ಕೆ ಪ್ರವೇಶಿಸದಂತೆ ತಡೆದರು, ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆಗೆ ಕಾರಣವಾಯಿತು.

Join Whatsapp
Exit mobile version